Saturday, 23rd June 2018

Recent News

2 weeks ago

ಜೀವದ ಹಂಗು ತೊರೆದು ಮಗುವಿನ ಜೀವ ಉಳಿಸಿದ ಪೊಲೀಸ್ ಅಧಿಕಾರಿ- ವೀಡಿಯೊ ನೋಡಿ

ವಾಷಿಂಗ್ಟನ್: ಪೊಲೀಸ್ ಅಧಿಕಾರಿಯೊಬ್ಬರು ತನ್ನ ಪ್ರಾಣವನ್ನು ಲೆಕ್ಕಿಸದೇ ವಾಹನ ದಟ್ಟಣೆ ಇರುವ ಹೆದ್ದಾರಿಯಲ್ಲಿ ಓಡುತ್ತಿದ್ದ ಮಗುವನ್ನು ರಕ್ಷಿಸಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕದ ಇಲಿನಾಯ್ಸ ಪ್ರದೇಶದ ಹೆದ್ದಾರಿಯೊಂದರಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ದೃಶ್ಯಗಳಲ್ಲಿ ತಾಯಿಯ ಕಣ್ಣು ತಪ್ಪಿಸಿ ಮಗುವೊಂದು ವಾಹನ ದಟ್ಟಣೆಯಿರುವ ಹೆದ್ದಾರಿಯಲ್ಲಿ ಓಡತೊಡಗಿತ್ತು. ಇನ್ನೇನು ಅದು ವಾಹನಗಳ ಚಕ್ರಕ್ಕೆ ಸಿಲುಕಬೇಕು ಎನ್ನುವುಷ್ಟರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಸಮಯಪ್ರಜ್ಞೆಯಿಂದ ಮಗುವನ್ನು ಅಪಾಯದಿಂದ ರಕ್ಷಿಸಿದ್ದಾರೆ. […]

9 months ago

ವಾಟ್ಸಪ್ ಸೇವೆಯನ್ನು ತಡೆ ಹಿಡಿದ ಚೀನಾ ಸರ್ಕಾರ

ಬೀಜಿಂಗ್: ಚೀನಾ ಸರ್ಕಾರ ಸೋಮವಾರ ರಾತ್ರಿ ವಾಟ್ಸಪ್ ಸೇವೆಯನ್ನು ತಡೆಹಿಡಿದಿದೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಇಂಟರ್ ನೆಟ್ ಜಗತ್ತಿನ ಆಗುಹೋಗುಗಳ ಬಗ್ಗೆ ಕಣ್ಗಾವಲು ಇಡಲು ಚೀನಾ ಸ್ಥಾಪಿಸುವ ಓಪನ್ ಒಬ್ಸರ್‍ವೆಟರಿ ಆಫ್ ನೆಟ್‍ವರ್ಕ್ ಇಂಟರ್ ಫೇಸ್(ಒಒಎನ್‍ಐ) ಸಲಹೆಯ ಹಿನ್ನೆಲೆಯಲ್ಲಿ ಸೋಮವಾರದಿಂದ ವಾಟ್ಸಪ್ ಸೇವೆಯನ್ನು ತಡೆಹಿಡಿಯಲಾಗಿದೆ ಎನ್ನಲಾಗಿದೆ. ಚೀನಾ ಸರ್ಕಾರ ಈ ವರ್ಷ ಆನ್‍ಲೈನ್...