Tuesday, 23rd January 2018

Recent News

3 hours ago

ಬಿಬಿಎಂಪಿ ಕಸದ ಲಾರಿ ಡಿಕ್ಕಿ – ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು

ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಸ್ಕೂಟರ್ ಗೆ ಡಿಕ್ಕಿಯಾದ ಪರಿಣಾಮ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ನಡೆದಿದೆ. ರಾಜಾಜಿನಗರ ನಿವಾಸಿಯಾದ ಸಾಹಿತ್ಯ(24) ಸಾವನ್ನಪಿದ್ದ ಯುವತಿ. ರಾಜಾಜಿನಗರದ ನಿವಾಸಿಯಾದ ಅವರು ಪ್ರಿಂಟಿಂಗ್ ಪ್ರೆಸ್ ಮಾಲೀಕ ನರಸರಾಜ್ ಮಗಳಾದ ಸಾಹಿತ್ಯ ಹೆಸರುಘಟ್ಟ ಬಳಿಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ಪದವಿ ಓದುತ್ತಿದ್ದರು. ಕನ್ನಿಂಗ್‍ಹ್ಯಾಮ್ ರಸ್ತೆಯ ಖಾಸಗಿ ಕಂಪನಿಯಲ್ಲಿ ತರಬೇತಿಗೆಂದು ಹೋಗುತ್ತಿದ್ದ ವೇಳೆ ಬಿಬಿಎಂಪಿ ಲಾರಿ ಚಾಲಕ ಅಡ್ಡಾದಿಡ್ಡಿ ವಾಹನ ಚಲಿಸಿದ್ದೆ ಈ ಅಪಘಾತಕ್ಕೆ ಕಾರಣ […]

12 hours ago

ರೈಲಿನ ಫುಟ್ ಬೋರ್ಡ್‍ನಿಂದ ಕೆಳಗೆ ಬಿದ್ದು ಯುವ ನಟ ದುರ್ಮರಣ

ಮುಂಬೈ: ರೈಲಿನಿಂದ ಬಿದ್ದ ಮರಾಠಿಯ ಯುವ ನಟರೊಬ್ಬರು ದುರ್ಮರಣಕ್ಕೀಡಾದ ಘಟನೆ ಸೋಮವಾರ ಬೆಳಗ್ಗೆ ಮುಂಬೈನಲ್ಲಿ ನಡೆದಿದೆ. ಪ್ರಫುಲ್ ಭಲೇರಾವ್(22) ರೈಲು ಅಪಘಾತದಲ್ಲಿ ಸಾವನ್ನಪ್ಪಿದ ನಟ. ಪ್ರಫುಲ್ ಮಲಾಡ್ ನಿಂದ ಗೋರೆಗಾಂವ್ ಗೆ ಹೋಗುತ್ತಿದ್ದ ರೈಲನ್ನು ಏರಿದಾಗ ಈ ಅವಘಡ ಸಂಭವಿಸಿದೆ. ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಪ್ರಫುಲ್ ರೈಲು ಹಿಡಿಯಲೆಂದು ಓಡಿಬಂದಿದ್ದು, ಫುಟ್ ಬೋರ್ಡ್ ನಲ್ಲಿ ನಿಂತಿದ್ದಾರೆ. ಈ...

ಪುಸ್ತಕ ತೆಗೆದುಕೊಂಡು ಮನೆಗೆ ಹೋಗ್ತಿದ್ದಾಗ ಟ್ಯಾಂಕರ್ ಡಿಕ್ಕಿ – ವಿದ್ಯಾರ್ಥಿನಿ ಬಲಿ

3 days ago

ಜೈಪುರ: ಸ್ಕೂಟಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದು, ಆಕೆಯ ಸಹೋದರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಜೋಧ್ಪುರನಲ್ಲಿ ನಡೆದಿದೆ. 20 ವರ್ಷದ ಮೀನಾ ಪುರಿ ಮೃತ ದುರ್ದೈವಿ. ಶುಕ್ರವಾರ ಮೀನಾ ಆಕೆಯ ಸಹೋದರಿಯ ಜೊತೆ ಸ್ಕೂಟಿಯಲ್ಲಿ ಜಲೋರಿ...

ಗಾಯಾಳುಗಳನ್ನು ಸಾಗಿಸಿದ್ರೆ ಪೊಲೀಸ್ ಕಾರಿನಲ್ಲಿ ರಕ್ತದ ಕಲೆಯಾಗುತ್ತೆ: ಖಾಕಿಗಳ ಅಮಾನವೀಯತೆಗೆ ಇಬ್ಬರು ಬಲಿ

3 days ago

ಲಕ್ನೋ: ರಸ್ತೆ ಅಪಘಾತದಲ್ಲಿ ಗಾಯಗೊಂಡ ಸವಾರರನ್ನು ಪೊಲೀಸರು ನೋಡಿಯೂ ಕೂಡಲೇ ಆಸ್ಪತ್ರೆಗೆ ದಾಖಲಿಸದ ಪರಿಣಾಮ ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದಿದೆ. 17 ವರ್ಷದ ಅರ್ಪಿತ್ ಖುರಾನಾ ಮತ್ತು ಸನ್ನಿ ಮೃತ ದುರ್ದೈವಿಗಳು. ಗುರುವಾರ ರಾತ್ರಿ ಇಬ್ಬರು...

ರಸ್ತೆ ದಾಟುತ್ತಿದ್ದ ವೇಳೆ ಮಹಿಳೆಯ ಕಾಲಿನ ಮೇಲೆ ಹರಿದ ಲಾರಿ

5 days ago

ಬೆಂಗಳೂರು: ರಸ್ತೆ ದಾಟುತ್ತಿದ್ದ ವೇಳೆ ಲಾರಿಯೊಂದು ಪಾದಚಾರಿ ಮಹಿಳೆಯ ಕಾಲಿನ ಮೇಲೆ ಹರಿದಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್‍ಪೇಟೆಯಲ್ಲಿ ನಡೆದಿದೆ. ಅತೀ ವೇಗವಾಗಿ ಬಂದ ಮಹಾರಾಷ್ಟ್ರ ಮೂಲದ ಲಾರಿ ನೆಲಮಂಗಲ ತಾಲೂಕಿನ ಮಾದೇನಹಳ್ಳಿ ಗ್ರಾಮದ ಸುವರ್ಣಮ್ಮ (44) ಅವರ...

ಶಾಲಾ ವಾಹನ, ಬೈಕ್ ಮುಖಾಮುಖಿ ಡಿಕ್ಕಿ – ನಾಲ್ವರು ದುರ್ಮರಣ

5 days ago

ಚಿಕ್ಕೋಡಿ: ಖಾಸಗಿ ಶಾಲಾ ವಾಹನ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖೋತನಟ್ಟಿ ಕ್ರಾಸ್ ಬಳಿ ನಡೆದಿದೆ. ಐಗಳಿ ಗ್ರಾಮದ ಮಾಣಿಕ್ಯ ಪ್ರಭು ಶಾಲಾ ವಾಹನದಲ್ಲಿ ಖೋತನಟ್ಟಿ ಗ್ರಾಮದಿಂದ ಮಕ್ಕಳನ್ನು ಕರೆ...

ಮಗುವನ್ನು ಶಾಲೆಯಿಂದ ಕರೆತರಲು ಹೋಗುವಾಗ ತಾಯಿಗೆ ಡಿಕ್ಕಿ ಹೊಡೆದ ಕಾರು- ಮಹಿಳೆ ಸ್ಥಳದಲ್ಲೇ ಸಾವು

6 days ago

ಬೆಂಗಳೂರು: ಶಾಲೆಗೆ ತೆರಳಿದ್ದ ತನ್ನ ಮಗುವನ್ನು ವಾಪಸ್ ಮನೆಗೆ ಕರೆತರಲು ತೆರಳುತ್ತಿದ್ದ ತಾಯಿಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನಪ್ಪಿರುವ ಧಾರುಣ ಘಟನೆ ಸಂಭವಿಸಿದೆ. ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ದಾಸನಪುರದ ಬಳಿ ನಡೆದಿದೆ. ತುಮಕೂರು ಬೆಂಗಳೂರು ರಾಷ್ಟ್ರೀಯ...

ಅಪಘಾತದಲ್ಲಿ ಪತಿ ಸಾವು- ಮನನೊಂದು 5ನೇ ಮಹಡಿಯಿಂದ ಜಿಗಿದ ಪತ್ನಿ- ವಿಡಿಯೋ ನೋಡಿ

6 days ago

ಗಾಂಧಿನಗರ: 38 ವರ್ಷದ ಮಹಿಳೆಯೊಬ್ಬರು ಪತಿಯ ಸಾವಿನಿಂದ ಮನನೊಂದು 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೂರತ್‍ನ ಸಿಟಿ ಲೈಟ್ ಏರಿಯಾದ ನಿವಾಸಿ ಶ್ವೇತಾ ಸುರೇಖಾ ಆತ್ಮಹತ್ಯೆಗೆ ಶರಣಾದ ಗೃಹಿಣಿ. ನಗರದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಶ್ವೇತಾ ಪತಿ ಆನಂದ್ ನಾವಲ್...