Wednesday, 23rd May 2018

Recent News

4 months ago

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಂಧ ಜೋಡಿ

ರಾಮನಗರ: ಹುಟ್ಟಿನಿಂದ ಅಂಧತ್ವದಲ್ಲೇ ಬದುಕುತ್ತಿದ್ದ ಅಂಧರಿಬ್ಬರು ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾಲೂಕಿನ ರಂಗನಾಥಸ್ವಾಮಿ ದೇವಾಲಯದಲ್ಲಿ ನಾಗರತ್ನ ಹಾಗೂ ಭೀಮಣ್ಣ ಎಂಬ ಅಂಧರಿಬ್ಬರು ಮದುವೆಯಾಗಿದ್ದಾರೆ. ದ್ವಿತೀಯ ಪಿಯುಸಿವರೆಗೆ ವ್ಯಾಸಾಂಗ ಮಾಡಿರುವ ಇಬ್ಬರೂ ಎರಡೂ ಕುಟುಂಬಗಳ ಪರಸ್ಪರ ಒಪ್ಪಿಗೆ ಮೂಲಕ ವಿವಾಹವಾಗಿದ್ದಾರೆ. ಮುನ್ನೇನಹಳ್ಳಿ ಗ್ರಾಮದ ಗೋವಿಂದಾಚಾರ್ ರವರ ಪುತ್ರಿ ನಾಗರತ್ನ ಹಾಗೂ ಮೈಸೂರಿನ ಬಿ.ಜಿ ಪುರದ ನಿವಾಸಿ ಭೀರೇಗೌಡರ ಪುತ್ರ ಭೀಮಣ್ಣನಿಗೂ ಇಂದು ವಿವಾಹ ನೆರವೇರಿದೆ. ಎರಡೂ ಕುಟುಂಬದ ಹಿರಿಯರೂ ಹಾಗೂ ಸ್ನೇಹಿತರು ವಿವಾಹ […]

9 months ago

ಅಂಧತ್ವಕ್ಕೆ ಸವಾಲು- ಕೋರ್ಟ್ ಮೆಟ್ಟಿಲೇರಿ ಬಿ.ಎಡ್ ಕಲಿತ ಛಲಗಾರ

ಬಳ್ಳಾರಿ: ಸಕಲ ಅಂಗಗಳು ಸರಿಯಾಗಿದ್ದರೂ ಕೆಲವರು ಸೋಮಾರಿಗಳಾಗಿರುತ್ತಾರೆ. ಆದರೆ ಹುಟ್ಟು ಅಂಧರಾದವರು ಸ್ವಾವಲಂಬಿ, ಅದರಲ್ಲೂ ಸವಾಲೆನಿಸುವ ಶಿಕ್ಷಕ ಕೆಲಸವನ್ನು ಮಾಡುತ್ತಿದ್ದಾರೆ. ಬ್ರೈಲ್ ಲಿಪಿ ಸಹಾಯದದಿಂದ ಮಕ್ಕಳಿಗೆ ಈರಪ್ಪ ಪಾಠ ಮಾಡುತ್ತಾರೆ. ಇವರು ಮೂಲತ: ಹುಬ್ಬಳ್ಳಿ ಬಳಿಯ ಸುಳ್ಯ ಗ್ರಾಮದವರು. ಇದೀಗ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಳೆದೊಂದು ವರ್ಷದಿಂದ ಶಿಕ್ಷಕರಾಗಿದ್ದಾರೆ....