ನರೇಂದ್ರ ಮೋದಿಗಾಗಿ ಬೆಂಗಳೂರಿನಲ್ಲಿ ನವದುರ್ಗಾ ಹೋಮ

ಬೆಂಗಳೂರು: ಲೋಕ ಕಲ್ಯಾಣಾರ್ಥ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಂಟಕ ನಿವಾರಣೆಗಾಗಿ ಬೆಂಗಳೂರಿನ ಎಚ್‍ಎಸ್‍ಆರ್ ಬಡಾವಣೆ ಬಿಡಿಎ ಕಾಂಪ್ಲೆ ಕ್ಸ್ ನಲ್ಲಿ ನವದುರ್ಗಾ ಹೋಮ ನಡೆಸಲಾಯಿತು.

ಪ್ರಧಾನಿ ನರೇಂದ್ರ ಮೋದಿ ಅಭಿಮಾನಿ ನಾಗೇಶ್ ಎಂಬುವರಿಂದ ಹೋಮ ನೆರವೇರಿಸಿದ್ದು, ವೇದ ಪಂಡಿತರಿಂದ ನಡೆಸುತ್ತಿರುವ ಹೋಮದಿಂದ ದೇಶಕ್ಕಾಗಿ ಕೈಗೊಳ್ಳುತ್ತಿರುವ ಸರ್ಜಿಕಲ್ ಸ್ಟ್ರೈಕ್, ನೋಟ್ ಬ್ಯಾನ್ ಮುಂತಾದ ದೃಢ ನಿರ್ಧಾರಗಳು ಯಾವುದೇ ವಿಘ್ನವಿಲ್ಲದೆ ಸಾಕಾರಗೊಳ್ಳುವಂತೆ ನವದುರ್ಗೆಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಸೇರಿದಂತೆ ನೂರಾರು ಜನರು ಭಾಗವಹಿಸಿ ಪ್ರಧಾನಿ ಮೋದಿ ರವರಿಗೆ ಯಾವುದೇ ಕಂಟಕ ಬಾರದಿರಲೆಂದು ಪ್ರಾರ್ಥಿಸಿದರು.

LEAVE A REPLY