Tuesday, 19th June 2018

Recent News

ಮಾವನ ಮನೆಯಲ್ಲಿ 11 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದ ಅಳಿಯ ಅರೆಸ್ಟ್

ಚಿಕ್ಕಬಳ್ಳಾಪುರ: ಮಾವನ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿ ಪರಾರಿಯಾಗಿದ್ದ ಅಳಿಯ ಪೊಲೀಸರ ಅತಿಥಿಯಾಗಿರುವ ಘಟನೆ ಜಿಲ್ಲೆಯ ಗುಡಿಬಂಡೆಯಲ್ಲಿ ನಡೆದಿದೆ.

ನೂರ್ ಮಹಮದ್ ಪೊಲೀಸರ ಅತಿಥಿಯಾಗಿರುವ ಕಳ್ಳ ಅಳಿಯ. ಮೂಲತಃ ಆಂಧ್ರದ ಹಿಂದೂಪುರ ಮೂಲದ ನೂರ್ ಮಹಮದ್ ಗುಡಿಬಂಡೆ ತಾಲೂಕಿನ ರಾಮಪಟ್ಟಣ ಗ್ರಾಮದ ಮಹಬೂಬ್ ಸಾಬ್ ರ ಕಿರಿಯ ಮಗಳು ಕೌಸರ್ ಉನ್ನೀಸಾರನ್ನ ವಿವಾಹವಾಗಿದ್ದ.

2 ವರ್ಷಗಳ ಹಿಂದೆ ಕೌಸರ್ ಉನ್ನೀಸಾ ಅನಾರೋಗ್ಯದ ಹಿನ್ನೆಲೆಯಲ್ಲಿ ತವರು ಮನೆ ಸೇರಿದ್ದರು. ಮಹಮದ್ ಪತ್ನಿ ಕೌಸರ್ ಉನ್ನೀಸಾರನ್ನ ನೋಡುವ ನೆಪದಲ್ಲಿ ಆಗಾಗ ಮನೆಗೆ ಬರುತ್ತಿದ್ದ. ಮನೆಯಲ್ಲಿ ಹಳೆಯ ಕಾಲದ ಪೆಟ್ಟಿಗೆಯಲ್ಲಿದ್ದ 370 ಗ್ರಾಂ ಚಿನ್ನಾಭರಣಗಳು, 450 ಗ್ರಾಂ ಬೆಳ್ಳಿ ಅಭರಣಗಳು ಸೇರಿದಂತೆ 6000 ರೂ. ನಗದು ಕಳವು ಮಾಡಿ ಪರಾರಿಯಾಗಿದ್ದ.

ಈ ಸಂಬಂಧ ಅಳಿಯನ ಮೇಲೆ ಅನುಮಾನಗೊಂಡಿದ್ದ ಮಾವ ಮೆಹಬೂಬ್ ಸಾಬ್ ಗುಡಿಬಂಡೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಕಳ್ಳ ಅಳಿಯ ನೂರ್ ಮಹಮದ್ ನನ್ನ ಬಂಧಿಸಿದ್ದಾರೆ. ಬಂಧಿತನಿಂದ 6000 ರೂ. ನಗದು ಸೇರಿದಂತೆ 11 ಲಕ್ಷದ 35 ಸಾವಿರದ 600 ರೂ. ಮೌಲ್ಯದ ಅಭರಣಗಳನ್ನ ವಶಪಿಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *