Thursday, 24th May 2018

ಮತ್ತೊಂದು ಸೂರ್ಯ ಗ್ರಹಣ-ಭಾರತಕ್ಕಿದೆಯಾ ಖಂಡಗ್ರಾಸ ಗ್ರಹಣದ ಎಫೆಕ್ಟ್?

ಬೆಂಗಳೂರು: ಹದಿನೈದು ದಿನಗಳ ಹಿಂದಷ್ಟೇ ಶತಮಾನದ ಭೂಮಂಡಲದ ಅಪರೂಪದ ಕೌತುಕ ರಕ್ತಚಂದಿರನ ಕಣ್ತುಂಬಿಕೊಂಡಿದ್ದೇವೆ. ಈಗ ಮತ್ತೊಂದು ಸೂರ್ಯ ಗ್ರಹಣಕ್ಕೆ ಜನ ಅಣಿಯಾಗಬೇಕಿದೆ. ಇಂದು ಮಧ್ಯರಾತ್ರಿ 12:25 ಗ್ರಹಣ ಆರಂಭವಾಗಿ, ಮುಂಜಾನೆ 4:17 ನಿಮಿಷಕ್ಕೆ ಮುಕ್ತಾಯವಾಗಲಿದೆ.

ಹುಡುಕಿದಷ್ಟೂ ಕೆದಕಿದಷ್ಟು ಕೌತುಕಗಳನ್ನ ಅಡಗಿಸಿಟ್ಟುಕೊಂಡಿರುವ ಸೌರಮಂಡಲದಲ್ಲಿ ಇಂದು ಮತ್ತೊಂದು ಕೌತುಕ ಘಟನೆ ನಡೆಯಲಿದೆ. ಈ ಖಂಡಗ್ರಾಸ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ, ಕರ್ನಾಟಕಕ್ಕೆ ಯಾವ ಎಫೆಕ್ಟ್ ಇರುವದಿಲ್ಲ. ಈ ಸೂರ್ಯಗ್ರಹಣ ದಕ್ಷಿಣ ಅಮೇರಿಕಾ, ಅಂರ್ಜೆಟೈನಾ, ಅಂಟಾರ್ಟಿಕಾದಲ್ಲಿ ಮಾತ್ರ ಗೋಚರಿಸುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಗ್ರಹಣ ಸಂಭವಿಸಲಿದ್ದು, ಸೂರ್ಯನ ಶೇಕಡಾ 30 ರಿಂದ 40 ರಷ್ಟು ಭಾಗ ಮಾತ್ರ ಗ್ರಹಣ ಪೀಡಿತವಾಗಿರುತ್ತದೆ.

ಈ ಗ್ರಹಣದ ಬಗ್ಗೆ ಭಯ ಬೇಡ ಅನ್ನೋದು ಕೆಲ ಜ್ಯೋತಿಷಿಗಳ ವಾದ. ಯಾಕೆಂದರೆ ಗ್ರಹಣ ಪೀಡಿತ ಪ್ರದೇಶದಲ್ಲಿ ಭಾರತವಾಗಲೀ ಅಥವಾ ಕರ್ನಾಟಕವಾಗಲೀ ಇಲ್ಲ. ಅಲ್ಲದೇ ಮಧ್ಯರಾತ್ರಿ ಗ್ರಹಣ ಆರಂಭವಾಗಿ ಮುಂಜಾನೆಯಷ್ಟರೊಳಗೆ ಮುಗಿದು ಹೋಗತ್ತದೆ. ಹಾಗಾಗಿ ಗ್ರಹಣ ಸಂಭವಿಸುವ ವೇಳೆ ನಾವೆಲ್ಲಾ ನಿದ್ರಾವಸ್ಥೆಯಲ್ಲಿರುತ್ತೇವೆ. ಹಾಗಾಗಿ ಆತಂಕ ಬೇಡ ಎಂದು ಜ್ಯೋತಿಷಿ ಡಾ. ವಿದ್ವಾನ್ ಕಮಲಾಕರ್ ಭಟ್ ಹೇಳುತ್ತಾರೆ.

ಮನುಷ್ಯನ ದೇಹ ಪಂಚಭೂತಗಳಿಂದ ಕೂಡಿದೆ. ಜಗತ್ತಿಗೆ ಒಬ್ಬನೇ ಸೂರ್ಯ. ಹಾಗಾಗಿ ಗ್ರಹಣ ಪೀಡಿತ ಸೂರ್ಯನಿಂದ ಕೆಲ ವ್ಯತಿರಿಕ್ತ ಪರಿಣಾಮಗಳು ಬೀರುತ್ತವಂತೆ. ಹಾಗಾಗಿ ಗ್ರಹಣ ಕಾಲದ ವ್ರತಾಚರಣೆಗಳನ್ನ ಪಾಲಿಸಬೇಕಂತೆ. ಒಟ್ಟಿನಲ್ಲಿ ಸೂರ್ಯ ಕಿರಣಗಳಂತೂ ನಮ್ಮ ಮೇಲೆ ಬೀಳಲ್ಲ. ಆದರೂ ಗ್ರಹಣ ಅತೀವವಾಗಿ ನಂಬುವವರು ಗ್ರಹಣ ಕಾಲಸ ರೀತಿ ರಿವಾಜುಗಳನ್ನ ಪಾಲಿಸೋದ್ರಿಂದ ಯಾವ ನಷ್ಟವೂ ಇಲ್ಲ ಅಂತಾ ಕೆಲ ಜ್ಯೋತಿಷಿಗಳು ಹೇಳುತ್ತಾರೆ.

Leave a Reply

Your email address will not be published. Required fields are marked *