Monday, 18th June 2018

Recent News

1 ರಾತ್ರಿಗೆ 20 ಲಕ್ಷ ರೂ. ನೀಡ್ತೀನಿ: ಆಫರ್ ಕೊಟ್ಟ ವ್ಯಕ್ತಿಗೆ ಖಡಕ್ ಉತ್ತರ ಕೊಟ್ಟ ನಟಿ ಸೋಫಿಯಾ

ಮುಂಬೈ: ಬಾಲಿವುಡ್ ನಟಿ ಹಾಗೂ ಮಾಡೆಲ್ ಸೋಫಿಯಾ ಹಯಾತ್ ಬಿಗ್ ಬಾಸ್ ಕಾರ್ಯಕ್ರಮದಿಂದಲ್ಲೇ ಸಾಕಷ್ಟು ಸುದ್ದಿ ಮಾಡಿದ್ದರು. ಆದರೆ ಈಗ ವ್ಯಕ್ತಿಯೊಬ್ಬ ಒಂದು ರಾತ್ರಿ ಕಳೆಯಲು ನಟಿಗೆ 20 ಲಕ್ಷ ಆಫರ್ ಮಾಡಿದ್ದು, ಆ ಸ್ಕ್ರೀನ್ ಶಾಟ್ ಅನ್ನು ಸೋಫಿಯಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಸೋಫಿಯಾ ಯಾವಾಗಲ್ಲೂ ಇನ್‍ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುತ್ತಾರೆ. ಆಗಾಗ ಫೋಟೋ, ವಿಡಿಯೋವನ್ನು ಹಾಕುತ್ತಿರುತ್ತಾರೆ. ಇತ್ತೀಚಿಗೆ ವ್ಯಕ್ತಿಯೊಬ್ಬ ಸೋಫಿಯಾಗೆ ಒಂದು ರಾತ್ರಿ ಕಳೆಯಲು 20 ಲಕ್ಷ ರೂ. ಆಫರ್ ಮಾಡಿದ್ದಾನೆ. ಇದ್ದಕ್ಕೆ ಸೋಫಿಯಾ ಪ್ರತಿಕ್ರಿಯಿಸಿ ಆತನಿಗೆ ಖಡಕ್ ಉತ್ತರವನ್ನು ನೀಡಿದ್ದಾರೆ.

20 ಲಕ್ಷ ಅಲ್ಲ 20 ಕೋಟಿ ರೂ. ಇದ್ದರೂ ನನ್ನನ್ನು ಖರೀದಿಸಲು ಸಾಧ್ಯವಿಲ್ಲ. ಆ 20 ಲಕ್ಷ ರೂ.ನಲ್ಲಿ ನಿನ್ನನ್ನು ಖರೀದಿಸಲಾಗುತ್ತಾ ಎಂದು ನಿನ್ನ ತಾಯಿಗೆ ಕೇಳಿ ನೋಡು ಎಂದು ಕೋಪದಲ್ಲಿ ಸೋಫಿಯಾ ವ್ಯಕ್ತಿಯ ಆ ಆಫರ್‍ಗೆ ಖಡಕ್ ಉತ್ತರ ನೀಡಿದ್ದಾರೆ. ಸೋಫಿಯಾ ಆ ವ್ಯಕ್ತಿಯ ಮೆಸೆಜ್‍ನ ಸ್ಕ್ರೀನ್ ಶಾಟ್ ತೆಗೆದುಕೊಂಡಿದಲ್ಲದೇ ತಮ್ಮ ಇನ್‍ಸ್ಟಾಗ್ರಾಂನಲ್ಲೂ ಪೋಸ್ಟ್ ಮಾಡಿದ್ದರು.

Replied

A post shared by Sofia Hayat (@sofiahayat) on

ಸೋಫಿಯಾ ಅವರ ಈ ಪೋಸ್ಟ್ ನೋಡಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ವ್ಯಕ್ತಿಯನ್ನು ಎಲ್ಲರ ಮುಂದೆ ತಂದಿದ್ದು, ಒಳ್ಳೆಯ ವಿಷಯ. ಈ ಮೂಲಕ ಆತನಿಗೆ ಒಳ್ಳೆಯ ಪಾಠ ಕಲಿಸಿದ್ದೀರಿ ಎಂದು ಜನರು ಸೋಫಿಯಾ ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಿಂದಿ ಬಿಗ್ ಬಾಸ್ ಶೋ ಹೊರಬಂದ ಮೇಲೆ ಸೋಫಿಯಾ ಹೆಚ್ಚು ಸುದ್ದಿಯಲ್ಲಿದ್ದರು. ಈ ಹಿಂದೆ ನಾನು ಸನ್ಯಾಸಿನಿ ಆಗುತ್ತಿರುವುದ್ದಾಗಿ ಹೇಳಿದ್ದರು. ಸನ್ಯಾಸಿ ಕೂಡ ಆಗಿದ್ದರು. ಆದರೆ ಸನ್ಯಾಸಿಯಂತೆ ಇರಲು ಸೋಫಿಯಾಗೆ ಸಾಧ್ಯವಾಗಲಿಲ್ಲ. ಮತ್ತೆ ಮೊದಲಿನಂತೆಯೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋವನ್ನು ಪೋಸ್ಟ್ ಮಾಡುತ್ತಿರುತ್ತಾರೆ.

Leave a Reply

Your email address will not be published. Required fields are marked *