ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ಮಾಡಿ ರಸ್ತೆಗೆ ಬಿಸಾಕಿದ್ರು!

ನವದೆಹಲಿ: ಚಲಿಸುತ್ತಿದ್ದ ಸ್ವಿಫ್ಟ್ ಕಾರಿನಲ್ಲೇ ಮಹಿಳೆಯ ಮೇಲೆ ಮೂವರು ಕಾಮುಕರು ಸಾಮಾಹಿಕ ಅತ್ಯಾಚಾರವೆಸಗಿ ಬಳಿಕ ರಸ್ತೆಗೆ ಬಿಸಾಕಿದ ಅಮಾನವೀಯ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ.

ಈ ಘಟನೆ ಮೇ 12 ರಂದು ನಡೆದಿದ್ದು, ಆಕೆ ದೆಹಲಿಯ ಕೊನ್ನಾಟ್ ಪ್ಲೇಸ್‍ನಲ್ಲಿ ತನ್ನ ಸಹಪಾಠಿಯನ್ನು ಭೇಟಿ ಮಾಡಿ, ಸಿನಿಮಾ ವೀಕ್ಷಿಸಿ, ನಂತ್ರ ಬಾರ್ ಗೆ ತೆರಳಿದ್ದಾರೆ. ಬಳಿಕ ಸಹಪಾಠಿ ಆಕೆಯನ್ನು ಸುಖ್ರಲಿ ಗ್ರಾಮದ ಮುಖ್ಯರಸ್ತೆ ಬಳಿ ಬಿಟ್ಟು ಹೋಗಿದ್ದಾನೆ. ಅಂತೆಯೇ ಮಹಿಳೆ ರಸ್ತೆ ಬದಿಯಲ್ಲಿ ತನ್ನ ಮನೆ ಗುರುಗಾಂವ್ ಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸ್ವಿಫ್ಟ್ ಕಾರಿನಲ್ಲಿ ಬಂದ ಮೂವರು ಕಾಮುಕರು ಆಕೆಯನ್ನು ಎಳೆದು ಕಾರಿನೊಳಗೆ ಹಾಕಿ ಸತತ ಮೂರು ಗಂಟೆಗಳ ಕಾಲ ಅತ್ಯಾಚಾರವೆಸಗಿದ್ದಾರೆ. ನಂತ್ರ ಬೆಳಗ್ಗೆ ಸರಿಸುಮಾರು 7 ಗಂಟೆಗೆ ರಸ್ತೆಯಲ್ಲಿ ಬಿಸಾಕಿ ಹೋಗಿದ್ದಾರೆ ಅಂತಾ ಮಹಿಳೆ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಆರೋಪದ ಬಳಿಕ ದೆಹಲಿ ಪೊಲೀಸರು ಗುರುಗಾಂವ್ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಅಂತೆಯೇ ಗುರುಗಾಂವ್ ಪೊಲೀಸರು ಅಪಹರಣ ಹಾಗೂ ಸಾಮೂಹಿಕ ಅತ್ಯಾಚಾರದ ಕುರಿತು ಕೇಸ್ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಆಕೆಯ ಸಹಪಾಠಿಯನ್ನು ಕೂಡ ವಿಚಾರಣೆ ನಡೆಸಿದ್ದಾರೆ.

ಮಹಿಳೆ ಸಿಕ್ಕಿಂನವರಾಗಿದ್ದು, ಇವರಿಗೆ 6 ವರ್ಷದ ಹೆಣ್ಣುಮಗಳಿದ್ದಾಳೆ. ಪೊಲೀಸರು ಘಟನೆ ನಡೆದ ಸ್ಥಳದ ಸಿಸಿಟಿವಿ ಹಾಗೂ ಕೆಲವೊಂದು ವಾಹನಗಳನ್ನು ಪರಿಶೀಲಿಸುತ್ತಿದ್ದಾರೆ.

You might also like More from author

Leave A Reply

Your email address will not be published.

badge