Friday, 22nd June 2018

Recent News

ಗಡ್ಡ ತೆಗೆಯುವಂತೆ ಕೊಹ್ಲಿಗೆ ಜಡೇಜಾ ಚಾಲೆಂಜ್- ಅನುಷ್ಕಾ ಹೀಗಂದ್ರು

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಜೋಡಿ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಈ ಇಬ್ಬರೂ ನಾವು ಪ್ರೇಮಿಗಳೆಂದು ಬಹಿರಂಗವಾಗಿ ಹೇಳಿಲ್ಲವಾದ್ರೂ ಇಬ್ಬರ ಕೆಮಿಸ್ಟ್ರಿ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತವೆ. ಕೊಹ್ಲಿ ಕೂಡ ಆಗಾಗ ಇದಕ್ಕೆ ಪುಷ್ಟಿ ನೀಡುವಂತಹ ಪೋಸ್ಟ್ ಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕ್ತಿರ್ತಾರೆ.

ಈಗ ವಿಷಯ ಏನಪ್ಪಾ ಅಂದ್ರೆ ಕೊಹ್ಲಿ ಗಡ್ಡ ತೆಗೆಯಲು ನಿರಾಕರಿಸಿದ್ದಾರೆ. ಇವಾಗ್ಯಾಕೆ ಈ ಪ್ರಶ್ನೆ ಬಂತು ಅಂದ್ರಾ? ಕ್ರಿಕೆಟಿಗ ರವೀಂದ್ರ ಜಡೇಜಾ ಕೊಹ್ಲಿಗೆ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಹಾಕಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ ಗಡ್ಡ ಬಿಟ್ಟಿರೋ ಒಂದು ಫೋಟೋವನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿ, ಜಡೇಜಾ, ಹಾರ್ದಿಕ್ ಪಾಂಡ್ಯ ಹಾಗೂ ರೋಹಿತ್ ಶರ್ಮಾ ಅವರಿಗೆ ಟ್ಯಾಗ್ ಮಾಡಿ, ಸಾರಿ ಬಾಯ್ಸ್. ಆದ್ರೆ ನಾನು ಸದ್ಯಕ್ಕೆ ಗಡ್ಡ ತೆಗೆಯಲು ಸಿದ್ಧವಿಲ್ಲ. ಆದ್ರೂ ಮೇಕ್‍ಓವರ್ ಮೇಲೆ ಭಾರೀ ಕೆಲಸವೇ ನಡೆಯುತ್ತಿದೆ ಅಂತ ಪೋಸ್ಟ್ ಹಾಕಿದ್ರು.

ಈ ಫೋಟೋಗೆ ಅನುಷ್ಕಾ ಶರ್ಮಾ ಕಮೆಂಟ್ ಮಾಡಿದ್ದು, you cannot- ನೀನಿದನ್ನು ಮಾಡಲು ಸಾಧ್ಯವೇ ಇಲ್ಲ(ಗಡ್ಡ ತೆಗೆಯುವಂತಿಲ್ಲ) ಎಂದಿದ್ದಾರೆ. ಇದಕ್ಕೆ ಕೊಹ್ಲಿ ‘ಒಕೆ’ ಅಂತ ಕಮೆಂಟ್ ಹಾಕಿ ಸ್ಮೈಲಿ ಮತ್ತು ಹಾರ್ಟ್ ಎಮೋಜಿ ಕೂಡ ಹಾಕಿದ್ದಾರೆ.

ಕೊಹ್ಲಿ ಹಾಗೂ ಅನುಷ್ಕಾ ಜೋಡಿ ಇಂತಹ ಸಿಹಿ ಸಂಗತಿಗಳನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರೋದು ಇದೇ ಮೊದಲೇನಲ್ಲ. ಪ್ರೇಮಿಗಳ ದಿನದಂದು ಕೊಹ್ಲಿ ಅನುಷ್ಕಾ ಜೊತೆಗಿನ ಫೋಟೋವನ್ನ ಹಾಕಿದ್ರು. ಅಲ್ಲದೆ ಇತ್ತೀಚೆಗೆ ಕೊಹ್ಲಿ ಇನ್‍ಸ್ಟಾಗ್ರಾಮ್‍ನ ಪ್ರೊಫೈಲ್ ಪಿಕ್ಚರ್‍ಗೆ ಅನುಷ್ಕಾ ಜೊತೆಗಿರುವ ಫೋಟೋವನ್ನ ಹಾಕಿದ್ದಾರೆ.

Leave a Reply

Your email address will not be published. Required fields are marked *