Thursday, 21st June 2018

Recent News

ವಿಡಿಯೋ: ರಸ್ತೆಯಲ್ಲಿ ಹೋಗ್ತಿದ್ದಾಗ ಹಿಂದಿನಿಂದ ಗುದ್ದಿದ ಗೂಳಿ- 10 ಅಡಿ ಗಾಳಿಯಲ್ಲಿ ಹಾರಿ ದೂರಕ್ಕೆ ಬಿದ್ದ ಮಹಿಳೆ

ಅಹಮದಾಬಾದ್: ರಸ್ತೆಯಲ್ಲಿ ಹೋಗ್ತಿದ್ದ ಅಪರಿಚಿತ ಮಹಿಳೆಗೆ ಹಿಂದಿನಿಂದ ಗೂಳಿ ಗುದ್ದಿದ ಪರಿಣಾಮ ಅವರು 10 ಅಡಿ ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

ಗುಜರಾತ್‍ನ ಭರೂಚ್‍ನಲ್ಲಿ ಮಂಗಳವಾರದಂದು ಈ ಘಟನೆ ನಡೆದಿದೆ. ನೋಡನೋಡ್ತಿದ್ದಂತೆ ಬೀಡಾಡಿ ಗೂಳಿ ತನ್ನ ಕೊಂಬಿನಿಂದ ಮಹಿಳೆಗೆ ಗುದ್ದಿದ ಪರಿಣಾಮ ಅವರು ಮೇಲೆ ಹಾರಿ ಕೆಲವು ಅಡಿಗಳಷ್ಟು ದೂರಕ್ಕೆ ಹೋಗಿ ಬಿದ್ದಿದ್ದಾರೆ.

ವಿಡಿಯೋದಲ್ಲಿ ಮೊದಲಿಗೆ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರೋದನ್ನ ಕಾಣಬಹುದು. ಅವರ ಹಿಂದೆ ಕಪ್ಪು ಬಣ್ಣದ ಗೂಳಿ ಬಂದಿದ್ದು, ಸ್ಕೂಟರ್ ಮೇಲೆ ಕುಳಿತಿದ್ದ ವ್ಯಕ್ತಿಗೆ ಗುದ್ದಿದೆ. ಬಳಿಕ ಅಲ್ಲೇ ಸ್ವಲ್ಪ ಮುಂದೆ ಹೋಗುತ್ತಿದ್ದ ಮಹಿಳೆಯ ಕಡೆಗೆ ಧಾವಿಸಿ ಏಕಾಏಕಿ ದಾಳಿ ಮಾಡಿದೆ. ಗೂಳಿಯ ದಾಳಿಯಿಂದ ಮಹಿಳೆ ದೂರಕ್ಕೆ ಹಾರಿದ್ದನ್ನು ನೋಡಿ ಸ್ಥಳದಲ್ಲಿದ್ದವರು ಒಂದು ಕ್ಷಣ ಭಯಗೊಂಡಿದ್ದರು.

ನಂತರ ಗೂಳಿ ತನ್ನ ಪಾಡಿಗೆ ಹೋಗಿದ್ದು, ಸಾರ್ವಜನಿಕರು ಮಹಿಳೆಯ ಬಳಿ ದೌಡಾಯಿಸಿದ್ದಾರೆ. ಈ ಎಲ್ಲಾ ದೃಶ್ಯಗಳು ಹತ್ತಿರದ ಅಂಗಡಿಯ ಬಳಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವಕ್ಕೆ ಯಾವುದೇ ತೊಂದರೆಯಿಲ್ಲ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *