Thursday, 19th October 2017

Recent News

ದಿ ವಿಲನ್ ಫಸ್ಟ್ ಲುಕ್ ರಿಲೀಸ್, ಬೆಂಗಳೂರಿನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಟಾಪಿಕ್

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಅಭಿನಯದ ಜೋಗಿ ಪ್ರೇಮ್ ನಿರ್ದೇಶನದ “ದಿ ವಿಲನ್” ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಪೋಸ್ಟರ್‍ನಲ್ಲಿ ಶಿವರಾಜ್ ಕುಮಾರ್ ಮತ್ತು ಸುದೀಪ್ ಹೊಸ ಹೇರ್ ಸ್ಟೈಲ್ ಮತ್ತು ಡಿಫರೆಂಟ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

ದಿ ವಿಲನ್ ಪೋಸ್ಟರ್ ಸ್ಯಾಂಡಲ್‍ವುಡ್ ಅಭಿಮಾನಿಗಳಿಗೆ ಖುಷಿ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಸಂಜೆ7 ಗಂಟೆಯಿಂದ  ಟ್ಟಿಟ್ಟರ್‍ನಲ್ಲಿ ಬೆಂಗಳೂರಿನ ಟ್ರೆಂಡ್ ಲಿಸ್ಟ್ ನಲ್ಲಿ “ದಿ ವಿಲನ್” ನಂಬರ್ ಒನ್ ಸ್ಥಾನದಲ್ಲಿತ್ತು.

ಈ ಹಿಂದೆಯೇ ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರ ಫೋಟೋ ಶೂಟ್ ಮಾಡಿಸಿಟ್ಟುಕೊಂಡಿದ್ದ ಪ್ರೇಮ್, ಇಂದು ಇವರಿಬ್ಬರ ಮತ್ತು ಚಿತ್ರದ ಮೊದಲು ಲುಕ್ ಬಿಡುಗಡೆ ಮಾಡಿದ್ದಾರೆ.”ದಿ ವಿಲನ್’ ಚಿತ್ರದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿ, ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿದೆ.

ಒಂದೂವರೆ ತಿಂಗಳ ಹಿಂದೆಯೇ, ಶಿವರಾಜ್ ಕುಮಾರ್ ಅವರ ಫೋಟೋ ಶೂಟ್ ಮಾಡಿದ್ದ ಪ್ರೇಮ್ ಹೆಬ್ಬುಲಿ ಚಿತ್ರ ಬಿಡುಗಡೆಯಾದ ಬಳಿಕ ಸುದೀಪ್ ಅವರ ಫೋಟೋ ಶೂಟ್ ನಡೆಸಿದ್ದರು.

ಶಿವರಾಜ್ ಕುಮಾರ್ ಅವರ ನಾಯಕಿಯಾಗಿ ಶ್ರುತಿ ಹರಿಹರನ್ ಆಯ್ಕೆಯಾಗಿದ್ದರೆ, ಸುದೀಪ್ ಜೋಡಿಗೆ ಹುಡುಕಾಟ ಆರಂಭವಾಗಿದೆ. ಆ್ಯಮಿ ಜಾಕ್ಸನ್, ತಮನ್ನಾ ಭಾಟಿಯಾ ಸೇರಿದಂತೆ ಹಲವರ ಹೆಸರುಗಳು ಕೇಳಿ ಬರುತ್ತಿದ್ದು, ಈ ಪೈಕಿ ಯಾರು ಅಂತಿಮವಾಗುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದ್ದು ತನ್ವಿ ಫಿಲಂಸ್‍ನಡಿ ಈ ಚಿತ್ರವನ್ನು ಸಿ.ಆರ್. ಮನೋಹರ್ ನಿರ್ಮಾಣ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *