Wednesday, 23rd May 2018

Recent News

ಶನಿವಾರದಿಂದ ಶಿರಾಡಿ ಘಾಟ್ ಬಂದ್ – ಬದಲಿ ಮಾರ್ಗಗಳು ಇಲ್ಲಿದೆ

ಬೆಂಗಳೂರು: ರಜೆ ಇದೆ. ಧರ್ಮಸ್ಥಳ, ಕುಕ್ಕೆ, ಮಂಗಳೂರು ಬೀಚ್ ಎಲ್ಲವನ್ನೂ ನೋಡೋಣ ಅಂತ ಪ್ಲಾನ್ ಮಾಡಿದ್ದರೆ, ನಿಮ್ಮ ಟೂರ್ ಪ್ಲಾನ್ ಮಾರ್ಗವನ್ನ ಬದಲಾಯಿಸಿಕೊಳ್ಳಿ. ಯಾಕಂದ್ರೆ, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ 48ರ ಶಿರಾಡಿ ಘಾಟ್ ಶನಿವಾರದಿಂದ ಸುಮಾರು 6 ತಿಂಗಳು ಬಂದ್ ಆಗಲಿದೆ.

ವರ್ಷಗಳಿಂದ ಹದಗೆಟ್ಟು ಹೋಗಿರುವ ಸುಮಾರು 13 ಕಿ.ಮೀ. ರಸ್ತೆ ಕಾಂಕ್ರಿಟಿಕರಣಗೊಳ್ಳುತ್ತಿದೆ. ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಕಾಮಗಾರಿಗೆ ಚಾಲನೆ ಸಿಗಲಿದ್ದು, ಮಳೆಗಾಲಕ್ಕೆ ಮುಂಚೆ ಪೂರ್ಣಗೊಳ್ಳಬೇಕಿದೆ. ಹೀಗಾಗಿ, ಬೆಂಗಳೂರು-ಮಂಗಳೂರು ಮಾರ್ಗದ ವಾಹನ ಸವಾರರು, ಭಾರೀ ವಾಹನಗಳು ಪರ್ಯಾಯ ರಸ್ತೆ ಬಳಸಬೇಕಿದೆ.

ಲಘು ವಾಹನ ಮಾರ್ಗ ಇಂತಿದೆ
(ಸಾಮಾನ್ಯ ಬಸ್, ಜೀಪು, ಕಾರು, ವ್ಯಾನ್, ಮಿನಿ ವ್ಯಾನ್, ದ್ವಿಚಕ್ರ ವಾಹನಗಳು)
* ಬೆಂಗಳೂರು-ಹಾಸನ-ಬೇಲೂರು-ಮೂಡಿಗೆರೆ-ಚಾರ್ಮಾಡಿಘಾಟ್- ಬೆಳ್ತಂಗಡಿ-ಉಜಿರೆ- ಬಿ.ಸಿ.ರೋಡು- ಮಂಗಳೂರು
* ಬೆಂಗಳೂರು-ಹಾಸನ-ಸಕಲೇಶಪುರ-ಆನೆಮಹಲ್, ಹಾನ್‍ಬಾಳ್-ಜೆನ್ನಾಪುರ, ಮೂಡಿಗೆರೆ-ಚಾರ್ಮಾಡಿ ಘಾಟ್-ಬೆಳ್ತಂಗಡಿ-ಉಜಿರೆ-ಬಿ.ಸಿ.ರೋಡ್-ಮಂಗಳೂರು
* ಬೆಂಗಳೂರು-ಹಾಸನ-ಮೂಡಿಗೆರೆ-ಕೊಟ್ಟಿಗೆಹಾರ-ಕಳಸ-ಕುದುರೆಮುಖ-ಮಾಲಘಾಟ್-ಕಾರ್ಕಳ-ಉಡುಪಿ-ಮಂಗಳೂರು
* ಮಂಗಳೂರು-ಬಿ.ಸಿ.ರೋಡ್-ಮಾಣಿ-ಪುತ್ತೂರು-ಮಡಿಕೇರಿ-ಹುಣಸೂರು-ಮೈಸೂರು-ಮಂಡ್ಯ-ರಾಮನಗರ-ಬೆಂಗಳೂರು
* ಬೆಂಗಳೂರು-ಶಿವಮೊಗ್ಗ-ಆಯನೂರು-ಹೊಸನಗರ ಮಾಸ್ತಿಕಟ್ಟೆ-ಬಾಳೆಬಾರೆಘಾಟ್-ಹೊಸಂಗಡಿ ಸಿದ್ದಾಪುರ-ಕುಂದಾಪುರ

ಭಾರಿ ವಾಹನ ಮಾರ್ಗ:
(ರಾಜಹಂಸ, ಐರಾವತ ಬಸ್, ಖಾಸಗಿ ಲಕ್ಸುರಿ ಬಸ್, ಬುಲೆಟ್ ಟ್ಯಾಂಕರ್ಸ್, ಕಾರ್ಗೊ ಕಂಟೈನರ್ಸ್, ಲಾಂಗ್ ಚಾಸೀಸ್ ವಾಹನಗಳು)
* ಮಂಗಳೂರು-ಬಿ.ಸಿ.ರೋಡ್-ಮಾಣಿ-ಪುತ್ತೂರು-ಸುಳ್ಯ-ಮಡಿಕೇರಿ-ಹುಣಸೂರು-ಕೆ.ಆರ್.ನಗರ-ಹೊಳೆನರಸಿಪುರ-ಹಾಸನ
* ಮಂಗಳೂರು-ಬಿ.ಸಿ.ರೋಡ್- ಮಾಣಿ- ಪುತ್ತೂರು-ಮಡಿಕೇರಿ-ಹುಣಸೂರು-ಮೈಸೂರು-ಮಂಡ್ಯ-ರಾಮನಗರ-ಬೆಂಗಳೂರು
* ಬೆಂಗಳೂರು-ಶಿವಮೊಗ್ಗ-ಆಯನೂರು-ಹೊಸನಗರ, ಮಾಸ್ತಿಕಟ್ಟೆ-ಬಾಳೆಬಾರೆಘಾಟ್ ಹೊಸಂಗಡಿ ಸಿದ್ದಾಪುರ-ಕುಂದಾಪುರ, ಬೆಂಗಳೂರು-ನೆಲಮಂಗಲ-ಶಿವಮೊಗ್ಗ-ಸಾಗರ-ಹೊನ್ನಾವರ-ಮುರುಡೇಶ್ವರ-ಕುಂದಾಪುರ-ಉಡುಪಿ-ಮಂಗಳೂರು

ಮಂಗಳೂರು – ಬೆಂಗಳೂರು – ಗುಂಡ್ಯದವರೆಗೆ ಮಾತ್ರ ಸಂಚಾರ
ಬೆಂಗಳೂರು- ಮಂಗಳೂರು ಸಕಲೇಶಪುರದ ಆನೆಮಹಲ್ ಕ್ರಾಸ್‍ವರಗೆ ಮಾತ್ರ ಸಂಚಾರ

Leave a Reply

Your email address will not be published. Required fields are marked *