Friday, 25th May 2018

Recent News

ಲಂಕಾ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದ ಧವನ್

ಡಂಬುಲಾ: ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಶಿಖರ್ ಧವನ್ ದಾಖಲೆ ಬರೆದಿದ್ದಾರೆ. ವಿಶ್ವದ ಯಾವುದೇ ತಂಡದ ವಿರುದ್ಧ ಸತತ 6 ಬಾರಿ 50 ಕ್ಕೂ ಹೆಚ್ಚು ರನ್ ಹೊಡೆದ ಮೊದಲ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಗೆ ಶಿಖರ್ ಧವನ್ ಪಾತ್ರರರಾಗಿದ್ದಾರೆ.

ಲಂಕಾ ವಿರುದ್ಧ ಈ ಹಿಂದಿನ ಪಂದ್ಯಗಳಲ್ಲಿ ಧವನ್ ಕ್ರಮವಾಗಿ 94, 113, 79, 91, 125 ರನ್ ಗಳಿಸಿದ್ದರು. ಭಾನುವಾರ ನಡೆದ ಪಂದ್ಯದಲ್ಲಿ ಧವನ್ ಅಜೇಯ 132 ರನ್(90 ಎಸೆತ, 20 ಬೌಂಡರಿ, 3 ಸಿಕ್ಸರ್) ಹೊಡೆದಿದ್ದರು.

ಈ ಹಿಂದೆ ಲಂಕಾ ವಿರುದ್ಧ ಆಸ್ಟ್ರೇಲಿಯಾದ ಮಾಜಿ ನಾಯಕ ಡೀನ್ ಜೋನ್ಸ್, ಮಾಜಿ ಭಾರತೀಯ ಕ್ರಿಕೆಟಿಗ ನವಜೋತ್ ಸಿಂಗ್ ಸಿಂಧು, ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮತ್ತು ಪಾಕಿಸ್ತಾನದ ಸಯೀದ್ ಅನ್ವರ್ 5 ಬಾರಿ ಸತತ 50ಕ್ಕೂ ಹೆಚ್ಚು ರನ್ ಸಿಡಿಸಿದ್ದರು.

ಟಾಸ್ ಸೋತು ಬ್ಯಾಟಿಂಗ್ ಇಳಿದ ಶ್ರೀಲಂಕಾ 43.2 ಓವರ್ ಗಳ್ಲಲಿ 216 ರನ್ ಗಳಿಗೆ ಆಲೌಟ್ ಆಗಿತ್ತು. ರೋಹಿತ್ ಶರ್ಮಾ 4 ರನ್ ಗಳಿಸಿ ಔಟಾದರೂ ನಂತರ ಶಿಖರ್ ಧವನ್ ಮತ್ತು ನಾಯಕ ಕೊಹ್ಲಿ ಮುರಿಯದ ಎರಡನೇ ವಿಕೆಟ್ ಗೆ 197 ರನ್ ಜೊತೆಯಾಟವಾಡಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ.

ಐದು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯ ಪಲ್ಲೆಕೆಲೆಯಲ್ಲಿ ಆಗಸ್ಟ್ 24ರಂದು ನಡೆಯಲಿದೆ.

 

Leave a Reply

Your email address will not be published. Required fields are marked *