Wednesday, 23rd May 2018

Recent News

ಸಂಭ್ರಮಾಚರಣೆಯ ವೇಳೆ ಗುಂಡೇಟಿಗೆ 7ರ ಬಾಲಕಿ ಬಲಿ

ಭೋಪಾಲ್: ಇತ್ತೀಚಿನ ದಿನಗಳಲ್ಲಿ ಮದುವೆ ಮನೆಯಲ್ಲಿ ನಡೆಯುವ ಗುಂಡು ಹಾರಿಸಿ ಸಂಭ್ರಮಾಚರಿಸುವುದಕ್ಕೆ ಹಲವಾರು ಮಂದಿ ಬಲಿಯಾಗುತ್ತಿದ್ದಾರೆ. ಇಂತಹದ್ದೇ ಘಟನೆಯೊಂದು ಇದೀಗ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.

ಹೌದು. ಮದುವೆ ಸಂಭ್ರಮಾಚರಣೆಯ ವೇಳೆ ನಡೆಸಿದ ಗುಂಡೇಟಿಗೆ 7 ವರ್ಷದ ಬಾಲಕಿ ಸೆಜಲ್ ಜಾದೌನ್ ಎಂಬಾಕೆ ಬಲಿಯಾಗಿದ್ದಾಳೆ. ಇದನ್ನೂ ಓದಿ: ವಧುವಿನ ತಂದೆ ಹಾರಿಸಿದ ಗುಂಡಿಗೆ ಟೆರೇಸ್ ಮೇಲಿದ್ದ ನೆರೆಮನೆಯ ಯುವತಿ ಬಲಿ!

ಸಂಬಂಧಿಕರ ಮನೆಯಲ್ಲಿನ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಬಾಲಕಿ ತನ್ನ ತಂದೆಯ ಜೊತೆ ತೆರಳಿದ್ದಳು. ಎಲ್ಲರೂ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಈ ವೇಳೆ ಬಾಲಕಿ ತನ್ನ ತಂದೆ ಸತೇಂದ್ರ ಜಾದೌನ್ ಜೊತೆ ನಿಂತಿದ್ದಳು. ಸಂಭ್ರಮಚಾಚರಣೆಯಲ್ಲಿ ಭಾಗಿಯಾಗಿದ್ದವರು ಸಂಭ್ರಮವನ್ನು ಇಮ್ಮಡಿಗೊಳಿಸಲು ಗುಂಡು ಹಾರಿಸಿದ್ದಾರೆ. ಈ ವೇಳೆ ಅವುಗಳಲ್ಲಿ ಒಂದು ಗುಂಡು ಬಾಲಕಿ ಹೊಟ್ಟೆಗೆ ಬಂದು ಬಿದ್ದಿದೆ.

ಘಟನೆ ನಡೆದ ಕೂಡಲೇ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅದಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ. ಈ ಕುರಿತು ಸೊಂಡ ಕೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಬ್ಯಾಚುಲರ್ ಪಾರ್ಟಿಯಲ್ಲಿ ವರನ ಮರ್ಮಾಂಗಕ್ಕೆ ಗೆಳೆಯನಿಂದ್ಲೇ ಬಿತ್ತು ಗುಂಡೇಟು!


ಕೆಲ ದಿನಗಳ ಹಿಂದೆಯಷ್ಟೇ 28 ವರ್ಷದ ಯೋಧರೊಬ್ಬರು ತನ್ನ ಗೆಳೆಯನ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆ ಗುಂಡೇಟು ತಗುಲಿ ಗಂಭೀರ ಗಾಯಗೊಂಡಿದ್ದರು.

Leave a Reply

Your email address will not be published. Required fields are marked *