ನವದೆಹಲಿ: ಭಾರತದ ಟೆನ್ನಿಸ್ ಸ್ಟಾರ್ ಸಾನಿಯಾ ಮಿರ್ಜಾ ತಾಯಿ ಆಗಲಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸೋಮವಾರ ಸಾನಿಯಾ ಪತಿ ಪಾಕಿಸ್ತಾನ ಕ್ರಿಕೆಟಿಗ ಶೋಯಬ್ ಮಲಿಕ್ ಟ್ವಿಟ್ಟರ್ ನಲ್ಲಿ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಟ್ವಿಟ್ಟರ್ ನಲ್ಲಿ ಮಿರ್ಜಾ ಮಲಿಕ್ ಅಂತಾ ಬರೆದುಕೊಂಡು ತಿಜೋರಿಯ ಫೋಟೋ ಹಾಕಿಕೊಂಡಿದ್ದಾರೆ. ಈ ತಿಜೋರಿಯಲ್ಲಿ ಮೂರು ಕಬೋರ್ಡ್ ಗಳಿದ್ದು, ಅದರಲ್ಲಿ ಮೂರು ಟೀಶರ್ಟ್ ಗಳಿವೆ. ಒಂದು ಟಿಶರ್ಟ್ ಮೇಲೆ ಮಲ್ಲಿಕ್ ಇನ್ನೊಂದರ ಮೇಲೆ ಮಿರ್ಜಾ ಅಂತಾ ಬರೆಯಲಾಗಿದೆ. ಈ ಎರಡು ಟೀಶರ್ಟ್ ಗಳ ಮಧ್ಯದಲ್ಲಿ ಮಿರ್ಜಾ-ಮಲಿಕ್ ಅಂತಾ ಬರೆದಿರುವ ಪುಟಾಣಿ ಬೇಬಿ ಡ್ರೆಸ್ ಕೂಡ ಇದೆ.
ಇದೇ ಫೋಟೋವನ್ನು ಸಾನಿಯಾ ಸಹ ಅಪ್ಲೋಡ್ ಮಾಡಿಕೊಂಡಿದ್ದು, ಬೇಬಿ ಮಿರ್ಜಾಮಲಿಕ್ ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ. ಟೀಶರ್ಟ್ ಮೇಲಿನ ಭಾಗದಲ್ಲಿ ಇತರೆ ಬಟ್ಟೆಗಳ ಜೊತೆ ನೀರಿನ ಬಾಟಲ್ ಇದ್ದರೆ, ಬೇಬಿ ಡ್ರೆಸ್ ಇರುವ ಮೇಲಿನ ಭಾಗದಲ್ಲಿ ಹಾಲಿನ ಬಾಟಲ್ ಇರುವುದನ್ನು ಕಾಣಬಹುದು.
2010ರಲ್ಲಿ ಸಾನಿಯಾ, ಪಾಕಿಸ್ತಾನದ ಕ್ರಿಕೆಟಿ ಶೋಯಬ್ ಜೊತೆ ಹೈದರಾಬಾದ್ ನಲ್ಲಿ ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯಾಗಿ 8 ವರ್ಷಗಳ ನಂತರ ಸಾನಿಯಾ ತನ್ನ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
#MirzaMalik ❤️ ???????? pic.twitter.com/8MKmA4CvR3
— Shoaib Malik ???????? (@realshoaibmalik) April 23, 2018
#BabyMirzaMalik ????????❤️ pic.twitter.com/RTYpqok1Vl
— Sania Mirza (@MirzaSania) April 23, 2018