Tuesday, 24th April 2018

ಶ್ರೀ ರೆಡ್ಡಿ ಬಳಿಕ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ ಟಾಲಿವುಡ್ ನಟಿ

ಹೈದರಾಬಾದ್: ಕಳೆದ ಕೆಲ ದಿನಗಳ ಹಿಂದೆ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ್ದ ನಟಿ ಶ್ರೀ ರೆಡ್ಡಿ ಬಳಿಕ ಟಾಲಿವುಡ್ ನ ಹಲವು ಸಹ ನಟಿಯರು ಈ ಕುರಿತು ಮಾತನಾಡಿದ್ದಾರೆ.

ಟಾಲಿವುಡ್ ನಟಿ ಶ್ರೀ ರೆಡ್ಡಿ ತೆಲುಗು ಫಿಲ್ಮ್ ಚೇಂಬರ್ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸಿ ಸಿನಿಮಾ ರಂಗದಲ್ಲಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಎಲ್ಲರ ಗಮನ ಸೆಳೆದಿದ್ದರು. ಸದ್ಯ ಇವರ ಹೋರಾಟಕ್ಕೆ ಸಹ ನಟಿಯರಾದ ಸಂಧ್ಯಾ ನಾಯ್ಡು, ಕೆ ಅಪೂರ್ವ, ಸುನೀತಾ ರೆಡ್ಡಿ ಧ್ವನಿ ಗೂಡಿಸಿದ್ದು, ತಮ್ಮ ಜೀವನದಲ್ಲಿ ನಡೆದ ಘಟನೆಗಳ ಕುರಿತು ಬಿಚ್ಚಿಟ್ಟಿದ್ದಾರೆ.

ಕಳೆದ 10 ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಧ್ಯಾ ನಾಯ್ಡು ಅವರು, ಹಲವು ಚಿತ್ರಗಳಲ್ಲಿ ಸಹ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಚಿತ್ರದಲ್ಲಿ ಮಗನ ಪಾತ್ರ ಮಾಡುವ ಕೆಲ ಮಂದಿ ರಾತ್ರಿಯಾಗುತ್ತಿದಂತೆ ಪಕ್ಕ ಬಂದು ಮಲಗುವಂತೆ ಕೇಳುತ್ತಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.

ಪ್ರತಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಮತ್ತೊಬ್ಬ ನಟಿ ಸುನೀತಾ ರೆಡ್ಡಿ ಮಾತನಾಡಿ ತಮ್ಮನ್ನು ಔಟ್ ಡೋರ್ ನಲ್ಲಿ ಬಟ್ಟೆ ಬದಲಿಸುವಂತೆ ಹಲವರು ಒತ್ತಾಯ ಮಾಡಿದ್ದಾರೆ. ಬಟ್ಟೆ ಬದಲಾಯಿಸಲು ಸ್ಟಾರ್ ನಟರ ಕ್ಯಾರವ್ಯಾನ್ ಬಳಕೆ ಮಾಡಲು ಕೇಳಿದರೆ ನಮ್ಮನ್ನು ಹುಳುಗಾಳ ರೀತಿ ನೋಡುತ್ತಾರೆ ಎಂದು ಹೇಳಿದ್ದಾರೆ. ಬಳಿಕ ಮಾತನಾಡಿದ ನಟಿ ಶ್ರೀ ರೆಡ್ಡಿ ತಾವು ಕಾಸ್ಟಿಂಗ್ ಕೌಚ್ ವಿರುದ್ಧ ಮಾಡುತ್ತಿರುವ ಹೋರಾಟ ಮುಂದುವರೆಯುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *