Friday, 23rd February 2018

Recent News

ತನ್ನ ಫೋಟೋ ಬಗ್ಗೆ ಟ್ರೋಲ್ ಮಾಡಿದವರಿಗೆ ಎಚ್ಚರಿಕೆ ನೀಡಿದ ಸಮಂತಾ!

ಹೈದರಾಬಾದ್: ಟಾಲಿವುಡ್ ಬ್ಯೂಟಿ ಸಮಂತಾ ಅಕ್ಕಿನೇನಿ ಮದುವೆಯಾದ ಬಳಿಕ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಶೂಟಿಂಗ್ ಬಿಡುವಿನಲ್ಲಿ ಸಮಂತಾ ರಜೆಯನ್ನು ಕಳೆದಿದ್ದು, ಅಲ್ಲಿ ತೆಗೆದ ಫೋಟೋವನ್ನು ತಮ್ಮ ಇನ್‍ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ಫೋಟೋ ಟ್ರೋಲ್ ಆಗಿದೆ.

ಸಮಂತಾ ಶೂಟಿಂಗ್‍ನಿಂದ ಕೆಲಕಾಲ ದೂರವಿದ್ದು, ವೆಕೇಶನ್ ಕಳೆದಿದ್ದಾರೆ. ಅಲ್ಲಿ ಬಿಕಿನಿ ಧರಿಸಿ ತೆಗೆದ ಫೋಟೋವೊಂದಕ್ಕೆ ‘ಇದು ಅಗತ್ಯವಲ್ಲ. ಇದು ಬೇಕೆಬೇಕು.. ಇದು ವೆಕೇಶನ್ ಸಮಯ ಎಂದು ಕ್ಯಾಪ್ಷನ್ ಹಾಕಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.

 

ಆ ಫೋಟೋವನ್ನು ಸಮಂತಾ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಭಾರೀ ಕಮೆಂಟ್‍ಗಳು ಬಿದ್ದಿವೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರೂ ಆ ಫೋಟೋಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಫೋಟೋ ನೋಡಿ ಕೆಲವರು ನಿಂದಿಸಿ ಕಮೆಂಟ್ ಮಾಡಿದ್ದಾರೆ.

ಸಮಂತಾ ಈ ಫೋಟೋದಿಂದ ಅಕ್ಕಿನೇನಿ ಅವರ ಕುಟುಂಬದ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ಇನ್ನೂ ಕೆಲವರು ಟೀಕಿಸಿದ್ದಾರೆ. ಈ ಕಮೆಂಟ್‍ಗಳೆಲ್ಲ ನೋಡಿ ಸಮಂತಾ ಅಭಿಮಾನಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

“ಸರಿ. ಈಗ ನಾನು ಒಂದು ಉಲ್ಲೇಖವನ್ನು ಇಟ್ಟುಕೊಳ್ಳಬೇಕಾಗುತ್ತದೆ. ಏಕೆಂದರೆ ನನ್ನ ಹಿಂದಿ ಪೋಸ್ಟ್ ನಿಜವಾಗಿಯೂ ಕಿರುಚುವ ಹಾಗೇ ಮಾಡಲಿಲ್ಲ. ನನ್ನ ನಿಯಮಗಳನ್ನು ನಾನೇ ಬರೆದುಕೊಳ್ಳುತ್ತೇನೆ, ನಿಮ್ಮ ನಿಯಮ ನೀವೂ ಬರೆದುಕೊಳ್ಳಿ” ಎಂದು ಸ್ಟೇಟಸ್ ಹಾಕುವ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸದ್ಯ ಸಮಂತಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ರಾಮ್ ಚರಣ್ ಜೊತೆ ‘ರಂಗಸ್ಥಲಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ‘ಸೂಪರ್ ಡಿಲೆಕ್ಸ್’ ಹಾಗೂ ತ್ರಿಭಾಷಾ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

Leave a Reply

Your email address will not be published. Required fields are marked *