ಮುಗ್ದ ಮುಖದ ಸಲ್ಮಾನ್ ಖಾನ್ `ಟ್ಯೂಬ್‍ಲೈಟ್’ ಚಿತ್ರದ ಹೊಸ ಪೊಸ್ಟರ್ ರಿಲೀಸ್

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ತಮ್ಮ ಮುಂದಿನ ಚಿತ್ರ ಟ್ಯೂಬ್ ಲೈಟ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರದ ಪೋಸ್ಟರ್‍ನಲ್ಲಿ ಹಾಫ್ ಸ್ವೆಟರ್ ಜೊತೆ ನೀಲಿ ಬಣ್ಣದ ಚೆಕ್ಸ್ ಶರ್ಟ್ ಹಾಕಿ, ಕೊರಳಿಗೆ ಎರಡು ಶೂಗಳನ್ನು ಹಾಕಿಕೊಂಡು ನಮಸ್ತೆ ಮಾಡುವುದನ್ನು ನಾವು ಕಾಣಬಹುದು.

ಸಲ್ಮಾನ್ ಖಾನ್ ತಮ್ಮ ಚಿತ್ರದ ಪೊಸ್ಟರ್‍ನ್ನು ತಮ್ಮ ಟ್ವೀಟ್ ಮಾಡಿದ್ದು, ಫೋಟೋ ಜೊತೆಗೆ `ಶಾಂತಿ, ಪ್ರೀತಿ, ಗೌರವ ಮತ್ತು ಬೆಳಕು ನಿಮ್ಮ ಜೀವನದಲ್ಲಿರಲಿ ಎಂದು ಟ್ಯೂಬ್‍ಲೈಟ್ ಚಿತ್ರತಂಡ ಹಾರೈಸುತ್ತದೆ’ ಎಂದು ಬರೆದಿದ್ದಾರೆ.

ಈಗಾಗಲೇ ಟ್ಯೂಬ್‍ಲೈಟ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, 5 ಲಕ್ಷಕ್ಕೂ ಹೆಚ್ಚು ವ್ಯೂವ್ ಪಡೆದಿದೆ. ಚಿತ್ರಕ್ಕೆ ಕಬೀರ್ ಖಾನ್ ನಿರ್ದೇಶನವಿದ್ದು, ಸಲ್ಮಾನ್‍ಗೆ ಜೊತೆಯಾಗಿ ಚೈನಿಸ್ ನಟಿ ಜುಜು ಕಾಣಿಸಿಕೊಂಡಿದ್ದಾರೆ. ಏಕ್ ಥಾ ಟೈಗರ್ ಮತ್ತು ಭಜರಂಗಿ ಭಾಯಿಜಾನ್ ಚಿತ್ರಗಳನ್ನು ನೀಡಿದ್ದ ಹಿಟ್ ಜೋಡಿ ಸಲ್ಮಾನ್ ಮತ್ತು ಕಬೀರ್ ಖಾನ್ ಟ್ಯೂಬ್‍ಲೈಟ್ ಚಿತ್ರವನ್ನು ತೆರೆಗೆ ತರಲು ತಯಾರಾಗಿದೆ.

ಟ್ಯೂಬ್‍ಲೈಟ್ ಸಿನಿಮಾ ಜೂನ್ ತಿಂಗಳಲ್ಲಿ ಈದ್ ಪ್ರಯುಕ್ತ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಸಲ್ಮಾನ ಸಹೋದರ ಸೋಹೆಲ್ ಖಾನ್ ಮತ್ತು ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸಹ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಸಿಗಲಿದ್ದಾರೆ.

 

 

You might also like More from author

Leave A Reply

Your email address will not be published.

badge