Monday, 24th February 2020

Recent News

ಪ್ರೇಮಿಗಳ ದಿನದಂದು ಥ್ರಿಲ್ ನೀಡೋಕೆ ಬರ್ತಿದೆ ‘ಸಾಗುತ ದೂರ ದೂರ’ ಸಿನಿಮಾ!

‘ಸಾಗುತ ದೂರ ದೂರ’ ಸ್ಯಾಂಡಲ್‍ವುಡ್ ಅಂಗಳದಲ್ಲಿ ಎಲ್ಲರ ಗಮನ ಸೆಳೆದಿರೋ ಚಿತ್ರ. ಟೈಟಲ್? ಹೇಳುವಂತೆ ಚಿತ್ರವೂ ಜರ್ನಿಯಲ್ಲೇ ಕಥೆಯನ್ನು ಪ್ರೇಕ್ಷಕರಿಗೆ ಹೇಳಲಿದೆ. ಆದ್ರೆ ಇದು ಯಾರ ಜರ್ನಿ ಯಾಕೆ ಸಾಗುತ್ತಾರೆ ಅನ್ನೋದನ್ನ ನೀವು ಚಿತ್ರದಲ್ಲೇ ನೋಡಬೇಕು. ಫೆಬ್ರವರಿ 14 ವ್ಯಾಲೆಂಟೈನ್ಸ್ ಡೇಯಂದು `ಸಾಗುತ ದೂರ ದೂರ’ ಚಿತ್ರ ಬಿಡುಗಡೆಯಾಗುತ್ತಿದೆ.

ಭಾವನಾತ್ಮಕ ಜರ್ನಿ ಒಳಗೊಂಡಿರೋ ಈ ಚಿತ್ರದಲ್ಲಿ ಕಥೆಯೇ ಜೀವಾಳವಾಗಿದ್ದು, ಪ್ರತಿ ಪಾತ್ರವೂ ಇಲ್ಲಿ ಎಲ್ಲರ ಗಮನ ಸೆಳೆಯಲಿದೆ. ಗುರಿಯನ್ನು ಅರಸಿ ಹೊರಟವರ ಕಥೆ ಚಿತ್ರದಲ್ಲಿದ್ದು, ತಾಯಿ ಮಗನ ಸೆಂಟಿಮೆಂಟ್ ಕಥೆಯ ಜೀವಾಳವಾಗಿದೆ. ಇಡೀ ಚಿತ್ರದ ನಿರೂಪಣೆ ಜರ್ನಿ ರೂಪದಲ್ಲೇ ಸಾಗಿರೋದು ಚಿತ್ರದ ವಿಶೇಷ ಸಂಗತಿ. ಜೊತೆಗೆ ಇನ್ನೂರು ವಿಭಿನ್ನ ಲೊಕೇಷನ್ ಗಳಲ್ಲಿ ಚಿತ್ರವನ್ನು ಸೆರೆ ಹಿಡಿದಿರೋದು ಈ ಚಿತ್ರದ ಇನ್ನೊಂದು ಇಂಟ್ರಸ್ಟಿಂಗ್ ಸಂಗತಿ. ಇಲ್ಲಿವರೆಗೂ ಚಿತ್ರದ ಎಳೆ ಬಗ್ಗೆ ಎಲ್ಲಿಯೂ ಚಿತ್ರತಂಡ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆದ್ರಿಂದ ಚಿತ್ರದಲ್ಲಿ ಏನಿರಬಹುದು ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದ್ದು ಚಿತ್ರ ಬಿಡುಗಡೆಯಾಗೋದನ್ನೇ ಕಾಯುತ್ತಿದ್ದಾರೆ.

ಹೊಸತನ ತುಂಬಿರೋ ಈ ಚಿತ್ರದ ಟ್ರೈಲರ್ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಮಣಿಕಾಂತ್ ಕದ್ರಿ ಸಂಗೀತ ಸ್ಪರ್ಶವಿರೊ ಹಾಡುಗಳು ಕೂಡ ಗಮನ ಸೆಳೆದಿವೆ. ಅಪೇಕ್ಷಾ ಪುರೋಹಿತ್, ಜಾನ್ವಿ ಜ್ಯೋತಿ, ಮಹೇಶ್, ಮಾಸ್ಟರ್ ಆಶಿಕ್, ಉಷಾ ಬಂಡಾರಿ, ನವೀನ್, ವಿಜಯ್ ಸೇರಿದಂತೆ ಹಲವು ಕಲಾವಿದರು ಸಾಗುತ ದೂರ ದೂರ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಖುಷಿ ಕನಸು ಕ್ರಿಯೇಷನ್ಸ್ ಬ್ಯಾನರ್?ನಡಿ ನಿರ್ಮಾಣ ಆಗಿರೋ ಈ ಚಿತ್ರಕ್ಕೆ ಅಮಿತ್ ಪೂಜಾರಿ ಬಂಡವಾಳ ಹಾಕಿದ್ದಾರೆ.

Leave a Reply

Your email address will not be published. Required fields are marked *