ಒಂದೇ ದಿನದಲ್ಲಿ 80 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಪಡೆದ ಸಚಿನ್-ಎ ಬಿಲಿಯನ್ ಡ್ರೀಮ್ಸ್ ಟ್ರೇಲರ್

ಮುಂಬೈ: ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜೀವನಾಧಾರಿತ ಚಿತ್ರವಾದ ಸಚಿನ್ ಎ ಬಿಲಿಯನ್ ಡ್ರೀಮ್ಸ್‍ನ ಟ್ರೇಲರ್ ಗುರುವಾರದಂದು ಬಿಡುಗಡೆಯಾಗಿದ್ದು, ಒಂದೇ ದಿನದಲ್ಲಿ 80 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ.

ಟ್ರೇಲರ್ ಬಿಡುಗಡೆಯಾದ ಬಗ್ಗೆ ಸಚಿನ್ ಕೂಡ ಟ್ವೀಟ್ ಮಾಡಿದ್ದಾರೆ. ದಿ ಸ್ಟೇಜ್ ಈಸ್ ಸೆಟ್ ಅಂಡ್ ವಿ ಆರ್ ರೆಡಿ ಟು ಬಿಗಿನ್ ಎಂದು ಟ್ವಿಟ್ಟರ್‍ನಲ್ಲಿ ಹೇಳಿದ್ದಾರೆ.

ಸಚಿನ್ ಅವರ ಬಾಲ್ಯ, 1983ರಲ್ಲಿ ಭಾರತ ವಿಶ್ವಕಪ್ ಗೆದ್ದಿದ್ದು, ಆಗ ಅವರು ಕ್ರಿಕೆಟ್ ಆಡಲು ಸ್ಫೂರ್ತಿ ಪಡೆದಿದ್ದು, ನಂತರ ಕ್ರಿಕೆಟ್ ದಂತಕಥೆಯಾಗಿದ್ದು- ಹೀಗೆ ಸಾಕಷ್ಟು ಸಂಗತಿಗಳು ಟ್ರೇಲರ್‍ನಲ್ಲಿದ್ದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

ಜೇಮ್ಸ್ ಎಸ್ರ್ಕಿನ್ ಈ ಚಿತ್ರವನ್ನ ನಿರ್ದೇಶಿಸಿದ್ದು, ಎಆರ್ ರೆಹಮಾನ್ ಸಂಗೀತವಿದೆ. ಚಿತ್ರ ಮೇ 26ರಂದು ಬಿಡುಗಡೆಯಾಗಲಿದೆ.

 

You might also like More from author

Leave A Reply

Your email address will not be published.

badge