Wednesday, 20th June 2018

Recent News

ಸಿಎಂ ಮನೆ ಕಾಫಿ-ಟೀ, ಬಿಸ್ಕೆಟ್‍ಗೆ ಖರ್ಚಾಗಿದ್ದು ಅರ್ಧ ಕೋಟಿ!

ಬೆಂಗಳೂರು: ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಸಿದ್ದರಾಮಯ್ಯ ಸರ್ಕಾರ ಕೊಟ್ಟಿದ್ದು ಸಾವಿರ ರೂಪಾಯಿಗಳ ಪರಿಹಾರ. ಆದ್ರೆ ಸಿಎಂ ಮನೆಯ ಬಿಸ್ಕೆಟ್ ಖರ್ಚು ಲಕ್ಷಾಂತರ ರೂಪಾಯಿ ಅನ್ನೋದು ನಿಮಗೆ ಗೊತ್ತಾ?

ಹೌದು. ಕಳೆದ 4 ವರ್ಷಗಳಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಕಾವೇರಿ ಮನೆ ಹಾಗೂ ಗೃಹ ಕಚೇರಿ ಕೃಷ್ಣದಲ್ಲಿನ ಮನೆಗೆ ಕಾಫಿ, ಟೀ, ಬಿಸ್ಕೆಟ್ ಹಾಗೂ ನೀರಿಗೆ ಬರೋಬ್ಬರಿ 60 ಲಕ್ಷ ಹಣ ಖರ್ಚು ಮಾಡಿದ್ದಾರೆ. ಗಣ್ಯರು, ಅತಿಗಣ್ಯರಿಗೆ ಲೆಕ್ಕ ಬಿಟ್ಟು ಇದು ಕೇವಲ ಸಿಎಂ ನಿವಾಸಕ್ಕೆ ಆಗಿರೋ ಖರ್ಚು ಮಾತ್ರ. ಈ ವಿಚಾರ ಈಗ ಮಾಹಿತಿ ಹಕ್ಕು ಕಾಯ್ದೆಯಡಿ ಬಯಲಾಗಿದೆ.

2013-2014 ಸಾಲಿನಲ್ಲಿ ಬಿಸ್ಕೆಟ್‍ಗೆ 3.65 ಲಕ್ಷ ರೂ. ಖರ್ಚು ಮಾಡಲಾಗಿದೆ. ಕಾಫಿ, ಟೀ, ಮಿನರಲ್ ವಾಟರ್‍ಗಾಗಿ 10 ಲಕ್ಷ ರೂ. ಖರ್ಚು ಮಾಡಲಾಗಿದ್ದು, ಒಟ್ಟಾರೆ 13.65 ಲಕ್ಷ ರೂ. ಕಾಫಿ, ಟೀ, ಬಿಸ್ಕೆಟ್‍ಗೆ ಖರ್ಚು ಮಾಡಲಾಗಿದೆ. ಇದೇ ರೀತಿ 2014-15ರಲ್ಲಿ ಬಿಸ್ಕೆಟ್‍ಗೆ 4.56 ಲಕ್ಷ, ಕಾಫಿ, ಟೀ, ನೀರಿಗೆ 6.5 ಲಕ್ಷ ರೂ. ಖರ್ಚು ಮಾಡಲಾಗಿದೆ. 2015-16ರಲ್ಲಿ ಬಿಸ್ಕೆಟ್‍ಗೆ 4.56 ಲಕ್ಷ ರೂ., ಕಾಫಿ, ಟೀ, ನೀರಿಗೆ 6.7 ಲಕ್ಷ ರೂ. ಖರ್ಚಾಗಿದೆ.

2016-17 ಸಾಲಿನಲ್ಲಿ ಬಿಸ್ಕೆಟ್ ಗೆ 4.5 ಲಕ್ಷ ರೂ., ಕಾಫಿ,ಟೀ,ನೀರು 7 ಲಕ್ಷ ರೂ. ವೆಚ್ಚ ಮಾಡಿದ್ರೆ, 2017-18 ನೇ ಸಾಲಿನಲ್ಲಿ ಬಿಸ್ಕೆಟ್‍ಗೆ 4.5 ಲಕ್ಷ ರೂ., ಕಾಫಿ, ಟೀ, ನೀರು 7.2 ಲಕ್ಷ ರೂ. ಖರ್ಚಾಗಿದೆ. ಒಟ್ಟಾರೆ ಬಿಸ್ಕೆಟ್‍ಗೆ 22 ಲಕ್ಷ ರೂ. ಖರ್ಚಾಗಿದ್ದು ಕಾಫಿ, ಟೀ, ನೀರಿಗೆ 38 ಲಕ್ಷ ರೂಪಾಯಿ ಆಗಿದೆ.

ಇನ್ನೊಂದು ಇಂಟ್ರಸ್ಟಿಂಗ್ ವಿಷಯ ಅಂದ್ರೆ ನಾಲ್ಕು ವರ್ಷಗಳಲ್ಲಿ ಬಿಸ್ಕೆಟ್ ಖರೀದಿಗೆ ಪ್ರತೀ ವರ್ಷ ನೀಡಿರೋದು 4.5 ಲಕ್ಷ ರೂ. ಯಾವ ವರ್ಷವೂ ಒಂದು ರೂಪಾಯಿ ಹೆಚ್ಚು ಕಡಿಮೆ ಆಗಿಲ್ಲ. ಅದೇ ರೀತಿ ನೀರಿಗೂ ಕೂಡ 1.75 ಲಕ್ಷ ರೂ. ಪ್ರತಿ ವರ್ಷ ಬಿಲ್ ಮಾಡಲಾಗಿದೆ. ಇಷ್ಟು ಲೆಕ್ಕ ಜಸ್ಟ್ ಸಿಎಂ ನಿವಾಸಕ್ಕೆ ಮಾತ್ರ. ಸಿಎಂ ನಿವಾಸಕ್ಕೆ ಬರೋ ಗಣ್ಯರು, ಅತೀ ಗಣ್ಯರಿಗೆ ಬಿಟ್ಟು ಖರ್ಚು ಮಾಡಿರೋ ಲೆಕ್ಕ ಇದು.

Leave a Reply

Your email address will not be published. Required fields are marked *