Saturday, 20th January 2018

ಇದೂವರೆಗೂ ಮಾಡದ ವಿಭಿನ್ನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್!

ಬೆಂಗಳೂರು: ಇದೂವರೆಗೂ ಮಾಡದ ವಿಭಿನ್ನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸಲಿದ್ದಾರೆ ಎಂಬ ಸುದ್ದಿ ಚಂದನವನದ ಅಂಗಳದಲ್ಲಿ ಬಲವಾಗಿ ಕೇಳಿ ಬರುತ್ತಿದೆ.

ಹೌದು, ಒಂದು ವೇಳೆ ಯಶ್ ತೆಲುಗುವಿನ ಸೂಪರ್ ಹಿಟ್ ಸಿನಿಮಾ `ಅರ್ಜುನ್ ರೆಡ್ಡಿ’ ರಿಮೇಕ್ ನಲ್ಕಿ ನಟಿಸುತ್ತಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಒಂದು ವೇಳೆ ಈ ಸಿನಿಮಾದಲ್ಲಿ ನಟಿಸುವುದು ಅಧಿಕೃತವಾಗಿ ದೃಢಪಟ್ಟರೆ ಅಭಿಮಾನಿಗಳು ಇದೂವರೆಗೂ ನೋಡದ ಯಶ್ ನ್ಯೂ ಲುಕ್ ಕಾಣಬಹುದಾಗಿದೆ.

 

ಟಾಲಿವುಡ್ ನಟ ವಿಜಯ್ ದೇವರಕೊಂಡ ಅಭಿನಯದ ಅರ್ಜುನ್ ರೆಡ್ಡಿ ಚಿತ್ರ ಇದೀಗ ಟಾಲಿವುಡ್‍ನ ಟಾಕ್ ಆಫ್ ದ ಟೌನ್ ಆಗಿದೆ. ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಚಿತ್ರವನ್ನ ಮೆಚ್ಚಿ ನಟ ಧನುಶ್ ತಮಿಳಿಗಾಗಿ ರಿಮೇಕ್ ಹಕ್ಕನ್ನ ಪಡೆದಿದ್ದಾರೆ. ಇದೀಗ ಸ್ಯಾಂಡಲ್‍ವುಡ್‍ನಲ್ಲೂ ಅರ್ಜುನ್ ರೆಡ್ಡಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಭಾರೀ ಮೊತ್ತಕ್ಕೆ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ರಿಮೇಕ್ ಹಕ್ಕುನ್ನು ಪಡೆದುಕೊಂಡಿದ್ದಾರೆ.

ಒಂದು ಮೂಲದ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ವಯಸ್ಸು, ಮ್ಯಾನರಿಸಂ ಮತ್ತು ಸ್ಟೈಲು ಎಲ್ಲವೂ ಅರ್ಜುನ್ ರೆಡ್ಡಿ ಚಿತ್ರಕ್ಕಾಗಿ ಮ್ಯಾಚ್ ಆಗುತ್ತದೆ. ಹೀಗಾಗಿ ಅರ್ಜುನ್ ರೆಡ್ಡಿ ಕನ್ನಡ ಅವತರಿಣಿಕೆಯಲ್ಲಿ ಯಶ್ ಅಭಿನಯಿಸೋದೇ ಸೂಕ್ತ ಎಂದು ಹೇಳಲಾಗುತ್ತಿದೆ.

ಸದ್ಯ ಕನ್ನಡಕ್ಕಂತೂ ಅರ್ಜುನ್ ರೆಡ್ಡಿ ಸಿನಿಮಾದ ರಿಮೇಕ್ ಹಕ್ಕು ಸಿಕ್ಕಿದೆ. ಆದರೆ ಸಿನಿಮಾದಲ್ಲಿ ಯಾರು ನಟಿಸುತ್ತಾರೆ ಎಂಬುದು ಮಾತ್ರ ಅಧಿಕೃತವಾಗಿ ಹೊರ ಬೀಳಬೇಕಿದೆ.

ತೆಲುಗುವಿನ ಅರ್ಜುನ್ ರೆಡ್ಡಿ ಟ್ರೇಲರ್ ನೋಡಿ:

 

Leave a Reply

Your email address will not be published. Required fields are marked *