Tuesday, 17th October 2017

Recent News

ನಿವೃತ್ತ ಡಿವೈಎಸ್‍ಪಿ ಗುಂಡಿಟ್ಟುಕೊಂಡು ಆತ್ಮಹತ್ಯೆ

ಮಡಿಕೇರಿ: ನಿವೃತ್ತ ಡಿವೈಎಸ್‍ಪಿಯೊಬ್ಬರು ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದಲ್ಲಿ ನಡೆದಿದೆ.

65 ವರ್ಷದ ಶಶಿ ಆತ್ಮಹತ್ಯೆ ಮಾಡಿಕೊಂಡ ನಿವೃತ ಅಧಿಕಾರಿ. ಗ್ರಾಮದ ಸ್ವನಿವಾದಲ್ಲಿ ನಾಡ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಶಿ ಅವರು ಲೋಕಾಯುಕ್ತ ವಿಭಾಗದಲ್ಲಿ ಈ ಹಿಂದೆ ಡಿವೈಎಸ್‍ಪಿಯಾಗಿದ್ದರು. ಆತ್ಮಹತ್ಯೆಗೆ ಕಾರಣವೇನೆಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *