Sunday, 27th May 2018

Recent News

ದನ ಕಾಯೋವಾಗ ಆಂಟಿ ಮೇಲೆ ಲವ್- ಮದ್ವೆ ಮಾಡಿಕೊಳ್ಳೋದಾಗಿ ನಂಬಿಸಿ ಯುವಕನಿಂದ ಅತ್ಯಾಚಾರ, ಕೊಲೆ ಯತ್ನ

ಯಾದಗಿರಿ: ಕಳೆದ ತಿಂಗಳು ವಿಜಯಪುರ ಜಿಲ್ಲೆಯಲ್ಲಿ ವಿದ್ಯಾರ್ಥಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಅತ್ಯಾಚಾರ ಮತ್ತು ಕೊಲೆ ಯತ್ನ ನಡೆದಿದೆ.

ಪ್ರೀತಿಸಿ ಮದುವೆಯಾಗುತ್ತೆನೆಂದು ನಂಬಿಸಿ ಅತ್ಯಾಚಾರಗೈದು ಮಹಿಳೆಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರಿನ ಕಂಟೋನ್ಮೆಂಟ್ ಹತ್ತಿರುವಿರುವ ವಂಸತನಗರದಲ್ಲಿ ನಡೆದಿದ್ದು, ಯಾದಗಿರಿ ತಾಲೂಕಿನ ವರ್ಕನಳ್ಳಿ ಗ್ರಾಮದ ವಿವಾಹಿತ ಮಹಿಳೆ ತಿಮ್ಮವ್ವ (40) ನೊಂದ ಸಂತ್ರಸ್ತೆ.

ದನ ಕಾಯಲು ಹೋದಾಗ ಸಂತ್ರಸ್ತೆ ಹಾಗೂ ಆರೋಪಿ ಕೋಯಿಲೂರ ಗ್ರಾಮದ ದೇವಪ್ಪ (35) ಇವರಿಬ್ಬರ ಮಧ್ಯೆ ಪರಸ್ಪರ ಪ್ರೀತಿ ಶುರುವಾಗಿತ್ತು. ಸಂತ್ರಸ್ತೆಗೆ ಈಗಾಗಲೇ ಮದುವೆಯಾಗಿದ್ದು, 10 ವರ್ಷದ ಹಿಂದೆ ಗಂಡನಿಂದ ದೂರವಾಗಿದ್ದಾರೆ. 6 ತಿಂಗಳಿಂದ ತಿಮ್ಮವ್ವ ಹಾಗೂ ದೇವಪ್ಪನ ಪ್ರೀತಿ ಹುಟ್ಟಿ ಮದುವೆ ಆಗುವ ಹಂತ ತಲುಪಿತ್ತು. ಸಂತ್ರಸ್ತೆ ಹೇಗಿದ್ದರೂ ಗಂಡನಿಂದ ದೂರುವಿದ್ದೇನೆ ಎಂದು ಮದುವೆಗೆ ಒಪ್ಪಿಕೊಂಡಿದ್ದಾರೆ. ಆದರೆ ದೇವಪ್ಪನ ಮನೆಯಲ್ಲಿ ತಿಮ್ಮವ್ವರನ್ನು ಮದುವೆ ಮಾಡಿಕೊಳ್ಳಲು ನೀರಾಕರಿಸಿದ್ದಾರೆ.

ತಿಮ್ಮವ್ವ ವಯಸ್ಸಿನಲ್ಲಿ ದೊಡ್ಡವರು ಎಂಬ ಕಾರಣಕ್ಕೆ ಮದುವೆ ಬೇಡ ಎಂದು ದೇವಪ್ಪನ ತಂದೆ ನಿರಾಕರಿಸಿದ್ದಾರೆ. ಮನೆಯವರ ನಿರಾಕರಣೆಯಿಂದ ಇವರಿಬ್ಬರು ಒಂದು ತಿಂಗಳ ಹಿಂದೆ ಮದುವೆ ಮಾಡಿಕೊಂಡು ಜೀವನಸಾಗಿಸಲು ಬೆಂಗಳೂರಿಗೆ ಹೋಗಿದ್ದಾರೆ. ಬೆಂಗಳೂರಿನ ಕಂಟೋನ್ಮಂಟ್ ನಲ್ಲಿ ಇಬ್ಬರು ವಾಸವಾಗಿದ್ದರು. ದೇವಪ್ಪ ಪೋಷಕರು ಕೂಡ ಬೆಂಗಳೂರಿನಲ್ಲಿ ವಾಸವಾಗಿದ್ದರು. ಜನವರಿ 1 ರಂದು ದೇವಪ್ಪ ಮಹಿಳೆಯನ್ನು ಗೃಹ ಬಂಧನಲ್ಲಿಟ್ಟಿದ್ದು, ಜನವರಿ 2 ರಂದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇನ್ನು ದೇವಪ್ಪನ ಪೋಷಕರು ಹಾಗೂ ಸಂಬಂಧಿಕರು ಸೇರಿ ಮಹಿಳೆಯ ಗುಪ್ತಾಂಗ ಹಾಗೂ ತೊಡೆ ಭಾಗದಲ್ಲಿ ಬರೆ ಎಳೆದಿದ್ದು, ಆಕೆಯನ್ನು ಸುಟ್ಟು ಹಾಕಲು ಯತ್ನಿಸಿದ್ದಾರೆ.

ಈ ಬಗ್ಗೆ ಮಹಿಳೆ ಸಂಬಂಧಿಕರಿಗೆ ಮಾಹಿತಿಯನ್ನು ನೀಡಿದ್ರು. ಕೂಡಲೇ ಸಂಬಂಧಿಕರು ತಿಮ್ಮವ್ವಯಿದ್ದ ಸ್ಥಳಕ್ಕೆ ಬಂದು ಆಕೆಯನ್ನು ಬೆಂಗಳೂರಿನಿಂದ ಯಾದಗಿರಿಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರೋ ಸಂತ್ರಸ್ತೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಪೊಲೀಸರು ಆತನ ಬಂಧನಕ್ಕೆ ಜಾಲ ಬೀಸಿದ್ದಾರೆ.

Leave a Reply

Your email address will not be published. Required fields are marked *