Monday, 18th June 2018

Recent News

ಪೋರ್ನ್ ಇಂಡಸ್ಟ್ರಿಯವರಿಗೆ ಸನ್ನಿ ಲಿಯೋನ್ ನನ್ನ ನಂಬರ್ ಕೊಟ್ಟಿದ್ದಾಳೆಂದು ಆರೋಪಿಸಿದ ರಾಖಿ ಸಾವಂತ್

ಮುಂಬೈ: ಸದಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗುವ ಬಾಲಿವುಡ್ ಹಾಟ್ ಬೆಡಗಿ ರಾಖಿ ಸಾವಂತ್ ಈಗ ಮಾದಕ ನಟಿ ಸನ್ನಿ ಲಿಯೋನ್ ಮೇಲೆ ಸ್ಫೋಟಕ ಆರೋಪವನ್ನು ಮಾಡಿದ್ದಾರೆ.

ಸನ್ನಿ ಲಿಯೋನ್ ನನ್ನ ಫೋನ್ ನಂಬರನ್ನು ವಯಸ್ಕರ ಚಿತ್ರರಂಗದವರಿಗೆ(ಪೋರ್ನ್ ಫಿಲ್ಮ್ ಜನರಿಗೆ) ನೀಡಿದ್ದಾರೆ. ನನಗೆ ಕರೆ ಮಾಡಿದ ಕೆಲವರು ನನ್ನನ್ನು ಪೋರ್ನ್ ಫಿಲ್ಮ್ ಗಳಲ್ಲಿ ನಟಿಸಲು ಆಹ್ವಾನಿಸಿದ್ದಾರೆ. ನನ್ನ ನಂಬರ್ ನಿಮಗೆ ಯಾರು ಕೊಟ್ಟರು ಅಂತಾ ಕೇಳಿದ್ದಕ್ಕೆ ಆ ವ್ಯಕ್ತಿ ಸನ್ನಿ ಲಿಯೋನ್ ಹೆಸರು ಹೇಳಿದ್ದಾರೆ ಅಂತಾ ರಾಖಿ ಸಾವಂತ್ ಆರೋಪಿಸಿದ್ದಾರೆ. ಇದನ್ನೂ ಓದಿ: ಕಿಸ್ಸಿಂಗ್ ಸೀನ್‍ನ ಕರಾಳ ಸತ್ಯ ಬಿಚ್ಚಿಟ್ಟ ರಾಖಿ ಸಾವಂತ್

ನಾನು ಸಾಯುತ್ತೇನೆ ವಿನಃ ಸೆಕ್ಸ್ ಫಿಲ್ಮ್ ಗಳಲ್ಲಿ ನಟಿಸಲಾರೆ. ನಾನು ಭಾರತೀಯ ಮಹಿಳೆಯಾಗಿದ್ದು, ಸಮಾಜದ ಮೌಲ್ಯಗಳ ಬಗ್ಗೆ ತಿಳುವಳಿಕೆಯನ್ನು ಹೊಂದಿದ್ದೇನೆ. ಬಿ-ಟೌನ್ ಗೆ ಒಳ್ಳೆಯ ಸಿನಿಮಾಗಳನ್ನು ನೀಡಿದ್ದೇನೆ. ನಾನು ನಟಿಸಿರುವ ಚಿತ್ರಗಳನ್ನು ಫ್ಯಾಮಿಲಿ ಜೊತೆ ನೋಡಬಹುದು. ನನಗೆ ಕರೆ ಮಾಡಿದ ವ್ಯಕ್ತಿ, ನನ್ನ ಮೊಬೈಲ್ ನಂಬರ್ ಸನ್ನಿ ನೀಡಿದ್ದಾಳೆ ಅಂತಾ ಹೇಳಿದನು ಅಂತಾ ರಾಖಿ ಸಾವಂತ್ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ವಿರುಷ್ಕಾ ಈ ಕಾಂಡೋಮ್‍ಗಳನ್ನೆ ಬಳಸಲಿ-ಪತಂಜಲಿ ಕಾಂಡೋಮ್ ತರ್ತಿರಾ: ರಾಮ್‍ದೇವ್‍ಗೆ ರಾಖಿ ಚಾಲೆಂಜ್

ರಾಖಿ ಸಾವಂತ್ ಆರೋಪಗಳಿಗೆ ಇದೂವರೆಗು ಸನ್ನಿ ಆಗಲಿ, ಪತಿ ವೆಬರ್ ಆಗಲಿ ಪ್ರತಿಕ್ರಿಯೆಯನ್ನು ನೀಡಿಲ್ಲ. ಕೆಲವು ದಿನಗಳ ಹಿಂದೆ ಸನ್ನಿ ಲಿಯೋನ್ ಮತ್ತು ಡೇನಿಯಲ್ ವೆಬರ್ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದರು. ಸನ್ನಿ ಅವಳಿ ಮಕ್ಕಳಿಗೆ ತಾಯಿಯಾಗಿದ್ದಕ್ಕೆ ರಾಖಿ ಸಾವಂತ್ ವಿಶ್ ಕೂಡ ಮಾಡಿದ್ದರು. ಈ ಹಿಂದೆ ಸನ್ನಿ ಲಿಯೋನ್ ನಿಶಾ ಎಂಬ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದರು. ಇದನ್ನೂ ಓದಿ: ಬಾಬಾ ರೂಮ್‍ನಲ್ಲಿ ವಯಾಗ್ರಾ ಇದ್ದಿದ್ದು ನೋಡಿದ್ದೆ- ರಾಖಿ ಸಾವಂತ್   

ಇದನ್ನೂ ಓದಿ: ಕೊಹ್ಲಿ ವಿರುದ್ಧ ಗರಂ ಆದ ಹಾಟ್ ಬೆಡಗಿ ರಾಖಿ ಸಾವಂತ್

Leave a Reply

Your email address will not be published. Required fields are marked *