Wednesday, 23rd May 2018

Recent News

ಮದುವೆ ಬಗ್ಗೆ ರಾಹುಲ್ ಗಾಂಧಿ ಕಲಬುರಗಿಯಲ್ಲಿ ಹೇಳಿದ್ದು ಹೀಗೆ

ಕಲಬುರಗಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮದುವೆ ಕುರಿತು ಎಲ್ಲರಿಗೂ ಕುತೂಹಲ ಇದ್ದೇ ಇದೆ. ಅಂತೆಯೇ ಕರ್ನಾಟಕಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಯುವಕನೊಬ್ಬ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ.

ಜಿಲ್ಲೆಯ ಎಚ್ ಕೆಇಎಸ್  ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂವಾದದ ಯವಕನೊಬ್ಬ ರಾಹುಲ್ ಜೀ ಯಾವಾಗ ಮದುವೆ ಆಗ್ತೀರಿ ಅಂತ ಕೇಳಿದ್ದಾನೆ. ಈ ವೇಳೆ ರಾಹುಲ್ ಗಾಂಧಿ ಅವರು, ಥ್ಯಾಂಕ್ಯೂ ವೆರೀ ಮಚ್ ಎಂದು ಪ್ರತಿಕ್ರಿಯಿಸಿ ಸುಮ್ಮನಾಗಿದ್ದಾರೆ. ಇದನ್ನೂ ಓದಿ: ಯಾವಾಗ ಮದುವೆಯಾಗ್ತೀರ ಎಂದು ಕೇಳೀದ್ದಕ್ಕೆ ರಾಹುಲ್ ಗಾಂಧಿ ಉತ್ತರಿಸಿದ್ದು ಹೀಗೆ

ಇದೇ ವೇಳೆ ವೇದಿಕೆಯಲ್ಲಿದ್ದ ಸಂಸದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರನ್ನು ನೋಡಿ ಮುಗುಳ್ನಗೆ ಬೀರಿದ್ರು.

ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಅವರು ಕಲಬುರಗಿಯ ಎಚ್ ಕೆಇ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂವಾದ ಉದ್ದೇಶಿಸಿ ಮಾತನಾಡಿದ್ದರು. ಈ ಕಾರ್ಯಕ್ರಮದಲ್ಲಿ ಮೊದಲೇ ನಿಗದಿಯಾದಂತೆ 7 ಪ್ರಶ್ನೆಗಳನ್ನು ಮಾತ್ರ ಕೇಳಲಾಗಿತ್ತು. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ರಾಹುಲ್ ಮದುವೆ ಪ್ರಸ್ತಾಪ ಬಂದಾಗ ಉತ್ತರಿಸಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ರಾಹುಲ್‍ಗೆ ದಲಿತ ಹೆಣ್ಣನ್ನು ಕೊಡಲು ಸಿದ್ಧ ಎಂಬ ಕಾರಜೋಳ ಹೇಳಿಕೆಗೆ ಸಿಎಂ ತಿರುಗೇಟು ನೀಡಿದ್ದು ಹೀಗೆ

ಈ ಹಿಂದೆ ದೆಹಲಿಯಲ್ಲಿ ನಡೆದ 112ನೇ ವಾರ್ಷಿಕ ಅಧಿವೇಶನ ಹಾಗೂ ಪಿಹೆಚ್ ಡಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಹುಲ್ ಗಾಂಧಿಗೆ ಬಾಕ್ಸರ್ ವಿಜೇಂದರ್ ಸಿಂಗ್ ಇದೇ ಪ್ರಶ್ನೆಯನ್ನು ಕೇಳಿದ್ದರು. ಈ ವೇಳೆಯೂ ರಾಹುಲ್ ಉತ್ತರಿಸಲು ನಿರಾಕರಿಸಿದ್ದರು. ಆದ್ರೆ ಸಿಂಗ್ ಅವರು ಉತ್ತರಿಸಲೇ ಬೇಕು ಅಂತ ಒತ್ತಾಯ ಮಾಡಿದ ಬಳಿಕ ರಾಹುಲ್ `ನಾನು ವಿಧಿಯ ಮೇಲೆ ನಂಬಿಕೆ ಇಟ್ಟವನು. ನನ್ನ ಮದುವೆ ಯಾವಾಗ ಆಗಬೇಕೆಂದಿದೆಯೋ ಅಂದೇ ಆಗುತ್ತೆ ಅಂತ ಉತ್ತರಿಸಿದ್ದರು.

Leave a Reply

Your email address will not be published. Required fields are marked *