Thursday, 22nd March 2018

ಮಗುವಿನೊಂದಿಗಿರೋ ಯಶ್ ಫೋಟೋ ಹಾಕಿ ಪತ್ನಿ ರಾಧಿಕಾ ಹೀಗೆ ತಮಾಷೆ ಮಾಡಿದ್ರು!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಸದ್ಯ ಅಮೆರಿಕದಲ್ಲಿದ್ದಾರೆ. ಪತಿ ಯಶ್ ತನ್ನ ಸಹೋದರನ ಮಗುವನ್ನ ಎತ್ತಿಕೊಂಡಿರೋ ಫೋಟೋವೊಂದನ್ನು ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಮಗುವನ್ನು ಮಡಿಲಲ್ಲಿ ಹಾಕಿಕೊಂಡು ರಾಧಿಕಾ ಇತ್ತೀಚೆಗಷ್ಟೇ ಫೋಟೋ ಹಾಕಿದ್ದರು. ಇದೀಗ ಯಶ್ ಫೋಟೋವನ್ನೂ ಕೂಡ ಹಂಚಿಕೊಂಡಿದ್ದಾರೆ. ರಿಯಾ ಎಂದು ಕಂದಮ್ಮನಿಗೆ ಹೆಸರಿಡಲಾಗಿದೆಯಂತೆ. ಮಗುವನ್ನು ಯಶ್ ಎತ್ತಿಕೊಂಡು ಮುದ್ದಾಡುತ್ತಿರುವ ಫೋಟೋ ಹಂಚಿಕೊಂಡಿರುವ ರಾಧಿಕಾ, `ಬಹುಶಃ ರಿಯಾಗೆ ಅಂಕಲ್ ಯಶ್ ಅವರ ಗಡ್ಡ ಇಷ್ಟವಾಗಿರಬೇಕು. ಇಲ್ಲಾ ಅದನ್ನು ತೆಗಿ ಅಂತ ಹೇಳುತ್ತಿರಬೇಕು’ ಅಂತ ಫೋಟೋದೊಂದಿಗೆ ತಮಾಷೆಯಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹಳೇ ಫೋಟೋ ಹಾಕಿ ವ್ಯಾಲೆಂಟೈನ್ಸ್ ಡೇ ವಿಶ್ ಮಾಡಿದ ಮಿಸಸ್ ರಾಮಾಚಾರಿ- ಪತ್ನಿ ಜೊತೆಗಿರಲು ಅಮೆರಿಕಗೆ ಹಾರಿದ್ರು ಯಶ್

ರಾಧಿಕಾ ಸಹೋದರ ಅಮೆರಿಕದ ಚಿಕಾಗೋದಲ್ಲಿ ನೆಲೆಸಿದ್ದು, ಇತ್ತೀಚೆಗಷ್ಟೇ ಅವರಿಗೆ ಹೆಣ್ಣು ಮಗುವಾಗಿದೆ. ಕುಟುಂಬಕ್ಕೆ ಹೊಸ ಅತಿಥಿಯ ಆಗಮನ ಆಗಿರುವುದರಿಂದ ಕೆಲ ದಿನಗಳ ಹಿಂದೆಯಷ್ಟೇ ರಾಧಿಕಾ ಅಮೆರಿಕಗೆ ಹಾರಿದ್ದರು. ನಂತರ ಯಶ್ ಕೂಡ ಚಿಕಾಗೋಗೆ ಹೋಗಿದ್ದು, ಪತಿಯೊಂದಿಗೆ ವ್ಯಾಲೆಂಟೈನ್ಸ್ ಡೇ ಆಚರಿಸಿದ ಫೋಟೋವನ್ನ ರಾಧಿಕಾ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಪತಿಯನ್ನು ಬಿಟ್ಟು ಒಬ್ಬರೇ ವಿಮಾನ ಹತ್ತಿದ ಮಿಸಸ್ ರಾಮಾಚಾರಿ!

Leave a Reply

Your email address will not be published. Required fields are marked *