Friday, 24th November 2017

Recent News

ಜಿಂಕೆಯನ್ನು ನುಂಗಿದ ಹೆಬ್ಬಾವು-ಅತ್ತ ಮುಂದೆಯೂ ಹೋಗ್ತಿಲ್ಲ, ಇತ್ತ ಹಿಂದೆಯೂ ಬರ್ತಿಲ್ಲ

ಶಿವಮೊಗ್ಗ: ಭಾರೀ ಗಾತ್ರದ ಹೆಬ್ಬಾವೊಂದು ಜಿಂಕೆಯನ್ನು ನುಂಗಿದ್ದು, ಮೈ ಭಾರವಾಗಿ ಚಲಿಸಲಾರದೇ ಒಂದೇ ಸ್ಥಳದಲ್ಲಿ ನರಳಾಡುತ್ತಿರುವ ದೃಶ್ಯ ಶಿವಮೊಗ್ಗ ತಾಲೂಕು ಪುರದಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಡ್ಡದ ಅರಕೆರೆ ಗ್ರಾಮದ ಬಳಿ ಕಂಡು ಬಂದಿದೆ.

ಭಾನುವಾರದಿಂದ ಹೆಬ್ಬಾವು ಒಂದೇ ಜಾಗದಲ್ಲಿದ್ದು, ಹೆಬ್ಬಾವನ್ನು ಗ್ರಾಮದ ಕೆಲವರು ಕೆಣಕುವ ಕೆಲಸ ಮಾಡುತ್ತಿದ್ದು, ಆದ್ರೆ ಹೆಬ್ಬಾವು ಏನೂ ಮಾಡಿಲ್ಲ. ಇನ್ನೂ ವಿಷಯ ತಿಳಿದ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹೆಬ್ಬಾವಿನ ರಕ್ಷಣೆಗೆ ಮುಂದಾಗಿದ್ದಾರೆ.

ದೊಡ್ಡ ಗಾತ್ರದ ಪ್ರಾಣಿಗಳನ್ನು ನುಂಗಿದಾಗ ಹೆಬ್ಬಾವುಗಳು ಒಂದೇ ಪ್ರದೇಶದಲ್ಲಿ ಬೀಡು ಬಿಡುತ್ತವೆ. ಜಿಂಕೆ ನುಂಗಿದ ಹೆಬ್ಬಾವು ಇಲ್ಲಿರುವುದನ್ನ ತಿಳಿದ ಸುತ್ತಮುತ್ತಲ ಗ್ರಾಮಗಳ ಜನರು ತಂಡತಂಡವಾಗಿ ಬಂದು ನೋಡಿ, ಮೊಬೈಲ್‍ನಲ್ಲಿ ಫೋಟೋ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಕಾಡಿನಲ್ಲಿ ಹೆಬ್ಬಾವು ಇರುವ ಬಗ್ಗೆ ಮಾಹಿತಿಯಿತ್ತು. ಆದರೆ ಗ್ರಾಮದ ಸಮೀಪಕ್ಕೆ ಬಂದಿರುವುದು ಇದೇ ಮೊದಲ ಬಾರಿ ಎಂದು ಗ್ರಾಮಸ್ಥರು ಹೇಳಿದ್ದಾರೆ.

 

 

Leave a Reply

Your email address will not be published. Required fields are marked *