Thursday, 26th April 2018

Recent News

ಈ ಶಾಲೆಯ ಎಲ್ಲಾ ಮಕ್ಕಳು ಒಮ್ಮೆಲೆ ಎರಡೂ ಕೈಯ್ಯಲ್ಲಿ ಸರಾಗವಾಗಿ ಬರೆಯುತ್ತಾರೆ!

ಭೋಪಾಲ್: ಬಹುತೇಕ ಮಂದಿ ಬರೆಯಲು ಬಲಗೈ ಬಳಸುತ್ತಾರೆ. ಅಲ್ಲದೆ 10% ಜನಸಂಖ್ಯೆ ಎಡಗೈಯ್ಯಲ್ಲಿ ಬರೆಯುವವರಾಗದ್ದಾರೆ. ಆದ್ರೆ ಎರಡೂ ಕೈಯ್ಯಲ್ಲಿ ಬರೆಯಬಲ್ಲವರು 1% ಜನ ಮಾತ್ರ. ಹೀಗಿರುವಾಗ ಮಧ್ಯಪ್ರದೇಶದ ಗ್ರಾಮವೊಂದರ ಈ ಶಾಲೆಯ ಎಲ್ಲಾ ಮಕ್ಕಳು ಎರಡೂ ಕೈಯ್ಯಲ್ಲಿ ಸರಾಗವಾಗಿ ಬರೆಯುತ್ತಾರೆ.

ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಗ್ರಾಮವೊಂದರಲ್ಲಿರುವ ವೀಣಾ ವಂದಿನಿ ಶಾಲೆಯ ಎಲ್ಲಾ 300 ಮಕ್ಕಳು ಎಡಗೈ ಹಾಗೂ ಬಲಗೈ ಎರಡರಲ್ಲೂ ಬರೆಯುತ್ತಾರೆ. ಅದರಲ್ಲೂ ಕೆಲವು ಮಕ್ಕಳು ವಿವಿಧ ಭಾಷೆಗಳಲ್ಲಿ ಒಂದೇ ಸಲಕ್ಕೆ ಎರಡು ಕೈಯ್ಯಲ್ಲಿ ಸರಾಗವಾಗಿ ಬರೆಯುತ್ತಾರೆ.

ಈ ಶಾಲೆಯಲ್ಲಿ 45 ನಿಮಿಷದ ತರಗತಿಯಲ್ಲಿ 15 ನಿಮಿಷವನ್ನ ಬರವಣಿಗೆ ಅಭ್ಯಾಸ ಮಾಡುವುದಕ್ಕಾಗಿಯೇ ಮೀಸಲಿಡಲಾಗಿದೆ. ಶಾಲೆಯ ಎಲ್ಲಾ ಮಕ್ಕಳು ಎರಡೂ ಕೈಯ್ಯಲ್ಲಿ ಬರೆಯುವ ಕುಶಲತೆಯನ್ನ ಕರಗತ ಮಾಡಿಕೊಳ್ಳಬೇಕು ಎನ್ನುವುದು ಇದರ ಉದ್ದೇಶವಾಗಿದೆ.

ಮಾಜಿ ಯೋಧರು ಹಾಗೂ ಶಾಲೆಯ ಸಂಸ್ಥಾಪಕರಾಗಿರುವ ವಿಪಿ ಶರ್ಮಾ ಈ ಬಗ್ಗೆ ಮಾತನಾಡಿ, ಎರಡೂ ಕೈಯ್ಯಲ್ಲಿ ಬರೆಯುತ್ತಿದ್ದ ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರೇ ಇದಕ್ಕೆ ಸ್ಫೂರ್ತಿ ಎಂದಿದ್ದಾರೆ. ಇದರಿಂದ ಸ್ಫೂರ್ತಿ ಪಡೆದು ನಾನೂ ಪ್ರಯತ್ನ ಮಾಡಿದೆ. ನಂತರ ನನ್ನ ಸ್ವಗ್ರಾಮದಲ್ಲಿ ಶಾಲೆ ಆರಂಭಿಸಿದಾಗ ವಿದ್ಯಾರ್ಥಿಗಳಿಗೂ ಎರಡು ಕೈಯ್ಯಲ್ಲಿ ಬರೆಯಲು ತರಬೇತಿ ನೀಡುವ ಪ್ರಯತ್ನ ಮಾಡಿದೆ ಎಂದು ಅವರು ಹೇಳಿದ್ದಾರೆ.

ಒಂದನೇ ತರಗತಿ ಮಕ್ಕಳಿಗೆ ಇದರ ತರಬೇತಿ ಶುರು ಮಾಡಿದೆವು. ಅವರು 3ನೇ ತರಗತಿಗೆ ಬರುವಷ್ಟರಲ್ಲಿ ಎರಡೂ ಕೈಯ್ಯಲ್ಲಿ ಬರೆಯುವ ಸಾಮಥ್ರ್ಯವನ್ನ ಹೊಂದಿರುತ್ತಿದ್ದರು. 7 ಮತ್ತು 8ನೇ ತರಗತಿಯ ಮಕ್ಕಳು ವೇಗವಾಗಿ ಮತ್ತು ಸ್ಪಷ್ಟವಾಗಿ ಎರಡೂ ಕೈಯ್ಯಲ್ಲಿ ಬರೆಯಬಲ್ಲರು. ನಂತರ ಒಂದೇ ಸಲಕ್ಕೆ ಎರಡು ಪ್ರತ್ಯೇಕ ಪಠ್ಯವನ್ನ ಬರೆಯಬಲ್ಲರು ಎಂದು ಅವರು ಹೇಳಿದ್ದಾರೆ.

ಈ ಶಾಲೆಯ ಮಕ್ಕಳು ಉರ್ದು ಸೇರಿದಂತೆ ವಿವಿಧ ಭಾಷೆಗಳನ್ನ ಬಲ್ಲವರಾಗಿದ್ದಾರೆ. ಈ ಶಾಲೆಯನ್ನ 1999ರಲ್ಲಿ ಆರಂಭಿಸಲಾಗಿದೆ. ಎರಡೂ ಕೈಯ್ಯಲ್ಲಿ ಬರೆಯುವ ಕುಶಲತೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಎರಡು ವರ್ಷಗಳ ಹಿಂದೆ ದಕ್ಷಿಣ ಕೊರಿಯಾದ ಸಂಶೋಧಕರೂ ಕೂಡ ಶಾಲೆಗೆ ಭೇಟಿ ನೀಡಿದ್ರು ಎಂದು ಶರ್ಮಾ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *