Saturday, 20th January 2018

ಫೇಸ್ ಬುಕ್ ಲೈವ್‍ನಲ್ಲಿ ದೊಡ್ಮನೆ ಬ್ರದರ್ಸ್ ಹೀಗಂದ್ರು!

ಬೆಂಗಳೂರು: ದೊಡ್ಮನೆ ಕುಡಿಗಳಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಶನಿವಾರ ಫೇಸ್ ಬುಕ್ ಲೈವ್‍ ನಲ್ಲಿ ಬಂದು ಅಭಿಮಾನಿಗಳ ಪ್ರಶ್ನೆಗೆ ಪಟ ಪಟ ಎಂದು ಉತ್ತರಿಸಿದ್ದರು.

ಶಿವಣ್ಣ ಅವರ ಬಹುನಿರೀಕ್ಷಿತ `ಟಗರು’ ಚಿತ್ರದ ಬಗ್ಗೆ ಪಿಆರ್‍ ಕೆ ಫೇಸ್ ಬುಕ್ ಪೇಜ್ ನಲ್ಲಿ ಮುಕ್ತವಾಗಿ ಮಾತನಾಡಿದ್ದರು. ಅಲ್ಲದೇ ಇಬ್ಬರು ಜೊತೆಯಾಗಿ ನಟಿಸೋ ಮುಂದಿನ ಚಿತ್ರದ ಬಗ್ಗೆಯೂ ಹೇಳಿದ್ದಾರೆ. ಇವರಿಬ್ಬರು ನಟಿಸುವ ಚಿತ್ರದ ಕಥೆಯನ್ನು ಶಿವಣ್ಣ ಅವರು ಒಪ್ಪಿಕೊಂಡಿದ್ದು, ಪುನೀತ್ ಅವರ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ.

ಡಿಸೆಂಬರ್ 23ರಂದು ಟಗರು ಚಿತ್ರದ ಆಡಿಯೋ ರಿಲೀಸ್ ಆಗಲಿದೆ ಎಂದು ಶಿವಣ್ಣ ತಿಳಿಸಿದ್ದರು. ಸೆಂಚುರಿ ಸ್ಟಾರ್ ಹಾಗೂ ಪವರ್ ಸ್ಟಾರ್ ನನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಫುಲ್ ಖುಷಿಯಾದರು.

ಉಪೇಂದ್ರ ಅವರ ನಿರ್ದೇಶನದಲ್ಲಿ ಮತ್ತೆ ನಟಿಸುತ್ತೀರಾ ಎಂದು ಅಭಿಮಾನಿ ಕೇಳಿದ ಪ್ರಶ್ನೆಗೆ, `ಖಂಡಿತ ನಟಿಸುತ್ತೇನೆ. ಅವರ ನಿರ್ದೇಶನದಲ್ಲಿ ಸಿನಿಮಾ ಮಾಡಿ 22 ವರ್ಷಗಳಾಗಿದೆ. ಆದರೆ ಈಗ ಅವರು ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ ಹಾಗೂ ಅವರ ಪಕ್ಷಕ್ಕೆ ಆಲ್ ದಿ ಬೆಸ್ಟ್’ ಎಂದು ಶಿವಣ್ಣ ಉತ್ತರಿಸಿದ್ದಾರೆ.

Leave a Reply

Your email address will not be published. Required fields are marked *