ಈ ಯಂತ್ರ ಅಳವಡಿಸಿಕೊಂಡರೆ ಡ್ರಂಕ್ ಆಂಡ್ ಡ್ರೈವ್ ಮಾಡೋಕಾಗಲ್ಲ

ಕೋಲಾರ: ನಗರದ ಎಂಜಿನಿಯರಿಂಗ್ ವಿದ್ಯಾರ್ಥಿನಿಯರು ಹೊಸ ತಂತ್ರಜ್ಞಾನದ ಯಂತ್ರವನ್ನು ಕಂಡು ಹಿಡಿದಿದ್ದಾರೆ. ಈ ಯಂತ್ರವನ್ನು ನಮ್ಮ ವಾಹನಗಳಲ್ಲಿ ಅಳವಡಿಸಿಕೊಂಡರೆ ಡ್ರಂಕ್ ಆಂಡ್ ಡ್ರೈವ್ ಮಾಡೋಕೆ ಆಗಲ್ಲ ಮತ್ತು ವಾಹನ ಕಳುವು ಆಗಲ್ಲ. ಅಪಘಾತವಾದರೆ ಕೂಡಲೇ ಆಂಬುಲೆನ್ಸ್, ಪೊಲೀಸ್ ಮತ್ತು ಕುಟುಂಬಸ್ಥರಿಗೆ ಸಂದೇಶ ರವಾನಿಸುತ್ತದೆ.

ಕೋಲಾರದ ಸಿ.ಬೈರೇಗೌಡ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಇಸಿಎಸ್ ವಿದ್ಯಾರ್ಥಿನಿಯರಾದ ಸ್ಫೂರ್ತಿ, ಚೈತ್ರರಾಣಿ, ನಯನ ಮತ್ತು ಬೇಬಿಶಾಮಲ ತಂಡ ಈ ಹೊಸ ಸುರಕ್ಷತಾ ಯಂತ್ರ ಆವಿಷ್ಕರಿಸಿದ್ದಾರೆ. ದೇಶದಲ್ಲಿ ಹೆಚ್ಚಿನ ಜನ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ತಾರೆ. ವಾಹನಗಳು ಕಳ್ಳತನವಾಗುತ್ತವೆ. ಇದನ್ನು ಮನಗಂಡು ಈ ತಂಡ ಹೊಸ ಯಂತ್ರವನ್ನು ಅವಿಷ್ಕರಿಸಿದೆ.

ಈ ಯಂತ್ರದ ಹೆಸರು `ವ್ಹೀಲ್ ವೆಹಿಕಲ್ ಸೇಫ್ಟಿ ಸಿಸ್ಟಮ್’. ರೇಡಿಯೋ ಫ್ರೀಕ್ವೆನ್ಸಿ, ಎಲ್‍ಸಿಡಿ, ಜಿಪಿಎಸ್ ಹಾಗೂ ಫೈಸೋ ಎಲೆಕ್ಟ್ರಿಕ್ಸ್ ಸಾಧನ ಬಳಕೆ ಮಾಡಲಾಗಿದೆ. ವಾಹನ ಅಪಘಾತವಾದರೆ ತಕ್ಷಣ ಆ ವ್ಯಾಪ್ತಿಯ ಆಂಬುಲೆನ್ಸ್, ಪೊಲೀಸ್ ಹಾಗು ಕುಟುಂಬದವರಿಗೆ ಈ ಸಾಧನ ಸಂದೇಶ ರವಾನಿಸುತ್ತೆ.

ವಾಹನ ಕಳುವಾದರೆ ಕೂಡಲೇ ವಾಹನದ ಸ್ಥಳ ಪತ್ತೆ ಹಚ್ಚಿ ಇಂಜಿನ್ ಲಾಕ್ ಮಾಡುತ್ತೆ. ಮತ್ತೊಂದು ವಿಶೇಷ ಅಂದರೆ ಈ ಸಿಸ್ಟಮ್ ಅಡಾಪ್ಟ್ ಮಾಡಿರೋ ವಾಹನವನ್ನ ಡ್ರಿಂಕ್ಸ್ ಮಾಡಿದವರು ಡ್ರೈವ್ ಮಾಡೋಕೆ ಹೋದರೆ ಸ್ಟಾರ್ಟ್ ಆಗುವುದಿಲ್ಲ.

ಈ ಯಂತ್ರ ಹೇಗಿದೆ ಎನ್ನುವುದಕ್ಕೆ ವಿದ್ಯಾರ್ಥಿನಿಯರು ಪಬ್ಲಿಕ್ ಟಿವಿಯಲ್ಲಿ ಮಾತನಾಡಿದ್ದು, ಆ ವಿಡಿಯೋವನ್ನು ಇಲ್ಲಿ ನೀಡಲಾಗಿದೆ.

 

LEAVE A REPLY