Tuesday, 26th September 2017

ಬೇಸಿಗೆಯಲ್ಲಿ ನೀಗಿಸ್ತಿದ್ದಾರೆ ಸಾರ್ವಜನಿಕರ ದಾಹ-ಆಟೋ ಚಾಲಕರಾದ್ರೂ ನಿಸ್ವಾರ್ಥ ಕಾಯಕ

ರಾಯಚೂರು: ಬಿರುಬೇಸಿಗೆ ಸಾರ್ವಜನಿಕರಿಗೆ ತಂಪು ನೀರು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ವ್ಯಕ್ತಿಯೇ ಇಂದಿನ ನಮ್ಮ ಪಬ್ಲಿಕ್ ಹೀರೋ. ನಗರಸಭೆ ಮಾಡಬೇಕಾದ ಕೆಲಸವನ್ನು ನಮ್ಮ ಇಂದಿನ ಪಬ್ಲಿಕ್ ಹೀರೋ ಮಾಡ್ತಾ ಇದ್ದಾರೆ.

ಹೌದು. ರಾಯಚೂರಿನ ವಾಸವಿ ನಗರದ ನಿವಾಸಿ ಆಟೋ ಡ್ರೈವರ್ ರಾಮಕೃಷ್ಣ ನಮ್ಮ ಪಬ್ಲಿಕ್ ಹೀರೋ. ಪ್ರತಿನಿತ್ಯ ತಮ್ಮ ಆಟೋದ ಮೊದಲ ಡ್ರಾಪ್‍ನಿಂದ ಬರೋ ದುಡ್ಡನ್ನ ನೀರು ಕೊಡೋದು ಸೇರಿದಂತೆ ಸಮಾಜ ಸೇವೆಗೆ ಮೀಸಲಿಟ್ಟಿದ್ದಾರೆ. ವಾಸವಿನಗರ ಬಸ್ ಹಾಗೂ ಆಟೋನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ತಣ್ಣಗಿರೋ ನೀರಿನ ವ್ಯವಸ್ಥೆ ಮಾಡಿದ್ದಾರೆ.

ಬೇಸಿಗೆ ಆರಂಭವಾದಾಗಿನಿಂದ ಪ್ರತಿನಿತ್ಯ 600 ರೂಪಾಯಿ ಖರ್ಚು ಮಾಡಿ 20 ಕ್ಯಾನ್ ತಣ್ಣಗಿರೋ ನೀರು ಪೂರೈಸ್ತಿದ್ದಾರೆ. ಬೆಳಿಗ್ಗೆ 9 ಗಂಟೆಗೆ ನೀರಿನ ಕ್ಯಾನ್ ತಂದಿಡುವ ರಾಮಕೃಷ್ಣ ಅವ್ರು ಎಲ್ಲಾ ಆಟೋ ಚಾಲಕರಿಗೂ ತಮ್ಮ ಮೊಬೈಲ್ ಸಂಖ್ಯೆ ಕೊಟ್ಟಿದ್ದಾರೆ. ನೀರು ಖಾಲಿಯಾದ ಕೂಡಲೇ ಒಂದು ಕಾಲ್ ಮಾಡಿದರೆ ಸಾಕು ಎಲ್ಲಿದ್ದರೂ ನೀರು ತಂದಿಡ್ತಾರೆ.

ರಾಯಚೂರು ನಗರಸಭೆ ಮಾಡದ ಈ ಕೆಲಸವನ್ನ ಪ್ರಚಾರದ ಹಂಗಿಲ್ಲದೆ, ನಿಸ್ವಾರ್ಥವಾಗಿ ಮಾಡ್ತಿರೋ ರಾಮಕೃಷ್ಣ ಅವ್ರ ಕಾರ್ಯಕ್ಕೆ ಜನ ಮೆಚ್ಚುಗೆ ಸಿಕ್ಕಿದೆ.

 

Leave a Reply

Your email address will not be published. Required fields are marked *