ಬಾರ್ ಮುಚ್ಚಿಸಿದ ಪೊಲೀಸರಿಗೆ ಅವಾಜ್- ಠಾಣೆಯಲ್ಲೇ ಕನ್ನಡ ಪರ ಮುಖಂಡನ ಗೂಂಡಾಗಿರಿ

ಹುಬ್ಬಳ್ಳಿ: ರಾತ್ರಿ ವೇಳೆ ಅವಧಿ ಮೀರಿ ನಡೆಸುತ್ತಿದ್ದ ಬಾರನ್ನು ಮುಚ್ಚಿಸಿದ ಪೊಲೀಸರಿಗೆ ಕನ್ನಡ ಪರ ಸಂಘಟನೆಯ ಮುಖಂಡನೊಬ್ಬ ಹುಬ್ಬಳ್ಳಿ ನವನಗರದ ಪೊಲೀಸ್ ಠಾಣೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದಲ್ಲದೇ ಜೀವ ಬೆದರಿಕೆ ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮಾರ್ಚ್ 5ರ ರಾತ್ರಿ ನಗರದ ಗೋಕುಲ್ ರಸ್ತೆಯ ಅರ್ಬನ್ ಓಯಾಸಿಸ್ ಮಾಲ್‍ನ ಜಂಕ್ಷನ್ ಬಾರ್ ಮತ್ತು ರೆಸ್ಟೋರೆಂಟನ್ನು ಅವಧಿ ಮೀರಿದರೂ ಬಂದ್ ಮಾಡಿರಲಿಲ್ಲ. ಈ ವೇಳೆ ಗಸ್ತಿನಲ್ಲಿದ್ದ ಎಎಸ್‍ಐ ಮೇಲಿನಮನೆ ಅವರು ಬಾರ್‍ನ ವ್ಯವಸ್ಥಾಪಕರನ್ನು ಠಾಣೆಗೆ ಕರೆತಂದಿದ್ದರು. ಅದೇ ಬಾರ್‍ನಲ್ಲಿದ್ದ ಉತ್ತರ ಕರ್ನಾಟಕ ಜನಶಕ್ತಿ ಸೇನಾ ಅಧ್ಯಕ್ಷ ಎಸ್.ಶಂಕರಣ್ಣ ಮತ್ತು ಸಹಚರ ವಿಜಯ್ ಶರ್ಮಾ ಎಂಬವರು ತಮ್ಮ ಸಹಚರರೊಂದಿಗೆ ಠಾಣೆಯ ಮುಂದೆ ಬಂದು ಎಎಸ್‍ಐ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಶಂಕರಣ್ಣ ಹಾಗು ವಿಜಯ್ ಠಾಣೆಯಲ್ಲಿದ್ದ ಇನ್ಸ್ ಪೆಕ್ಟರ್ ಎಸ್.ಆರ್.ನಾಯಕ್ ಎಂಬವರ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಠಾಣೆಗೆ ಬಂದು ಪೆÇಲೀಸ್ ಅಧಿಕಾರಿಗಳಿಗೆ ಅವಾಜ್ ಹಾಕಿದ್ದಲ್ಲದೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೆ ಏಕವಚನದಲ್ಲಿ ಸಂಭೋದಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಯ ಮುಖಂಡ ಶಂಕರಣ್ಣ ಹಾಗು ಅವರ ಸಹಚರ ವಿಜಯ್ ಶರ್ಮಾ ಅವರನ್ನು ಮಾಚ್ 5 ರಂದು ಬಂಧಿಸಲಾಗಿತ್ತು. ಗುರುವಾರದಂದು ಶಂಕರಣ್ಣ ಹಾಗೂ ವಿಜಯ್ ಷರತ್ತು ಬದ್ಧ ಜಾಮೀನು ಪಡೆದು ಹೊರ ಬಂದಿದ್ದಾರೆ.

 

You might also like More from author

Leave A Reply

Your email address will not be published.

badge