Wednesday, 20th June 2018

Recent News

ತನ್ನ ನೆಚ್ಚಿನ ಕ್ರಿಕೆಟರ್ ಯಾರು ಅನ್ನೋದನ್ನು ರಿವಿಲ್ ಮಾಡಿದ್ರು ಪ್ರಿಯಾ

ನವದೆಹಲಿ: ತನ್ನ ಕಣ್ ಸನ್ನೆ ಮೂಲಕ ಅಂತರ್ ಜಾಲದಲ್ಲಿ ಭಾರೀ ಸದ್ದು ಮಾಡಿದ್ದ ಮಲೆಯಾಳಂ ನಟಿ ಪ್ರಿಯಾ ವಾರಿಯರ್, ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತನ್ನ ನೆಚ್ಚಿನ ಕ್ರಿಕೆಟ್ ಆಟಗಾರ ಎಂದು ಹೇಳಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶನದಲ್ಲಿ ನೆಚ್ಚಿನ ಕ್ರಿಕೆಟ್ ಆಟಗಾರ ಯಾರು ಎಂಬ ಪ್ರಶ್ನೆಗೆ ಧೋನಿ ತನ್ನ ನೆಚ್ಚಿನ ಆಟಗಾರ ಎಂದು ಉತ್ತರಿಸಿದ್ದಾರೆ.

ಚಿತ್ರ ಪ್ರಚಾರ ಭಾಗವಾಗಿ ಸಂದರ್ಶನ ನೀಡಿದ ವಾರಿಯರ್ ಚಿತ್ರದ ಹಾಡಿನ ಸನ್ನಿವೇಶದ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು. ನಿರ್ದೇಶಕರು ನನ್ನ ಹಾಗೂ ಚಿತ್ರದ ನಾಯಕನ ಜೊತೆ ಒಂದು ಮುಗ್ಧ ಪ್ರೀತಿಯ ಸನ್ನಿವೇಶವನ್ನು ಚಿತ್ರೀಕರಿಸಲು ನಿರ್ಧರಿಸಿದ್ದರು. ಈ ವೇಳೆ ನನ್ನ ಕಣ್ಣು ನೋಡಿ ಹೈಲೆಟ್ ಮಾಡಿ ದೃಶ್ಯವನ್ನು ಸಂಯೋಜಿಸಿದ್ದರು. ಆದರೆ ಈ ವೇಳೆ ಅದಷ್ಟು ಉತ್ತಮವಾಗಿ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದ್ದೆ. ಅದು ವರ್ಕ್ ಆಗಿದೆ. ಆದರೆ ವಿಶ್ವಾದ್ಯಂತ ಇಷ್ಟು ಯಶಸ್ಸು ಲಭಿಸಿಸುತ್ತದೆ ಎಂದು ಊಹಿಸಿರಲಿಲ್ಲ ಎಂದಿದ್ದಾರೆ.

ಮಲೆಯಾಳಂ ನ `ಒರು ಅಡಾರ್ ಲವ್’ ಸಿನಿಮಾದ ಹಾಡೊಂದರಲ್ಲಿ ತನ್ನ ಕಣ್ ಸನ್ನೆ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ 18 ಹರೆಯದ ನಟಿ ಪ್ರಿಯಾ ವಾರಿಯರ್ ಇನ್ ಸ್ಟಾಗ್ರಾಮ್ ನಲ್ಲಿ ಒಂದೇ ದಿನದಲ್ಲಿ 6 ಲಕ್ಷಕ್ಕೂ ಅಧಿಕ ಫಾಲೊವರ್ಸ್ ಪಡೆಯುವ ಮೂಲಕ ಭಾರತದಲ್ಲಿ ದಾಖಲೆ ಸೃಷ್ಟಿಸಿದ್ದರು. ಈ ಮೂಲಕ ಹಾಲಿವುಡ್ ನ ಸ್ಟಾರ್ ಗಳಾದ ಅಮೆರಿಕ ಮಾಡೆಲ್, ಟಿವಿ ನಿರೂಪಕಿ ಕೈಲೀ ಜೆನ್ನರ್ (8 ಲಕ್ಷ) ಮತ್ತು ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ (6.50 ಲಕ್ಷ )ಅವರ ಸಾಲಿನಲ್ಲಿ ಬಂದು ನಿಂತಿದ್ದರು.

Leave a Reply

Your email address will not be published. Required fields are marked *