Thursday, 21st June 2018

Recent News

ಅನುಷ್ಕಾ ಫ್ಯಾನ್ಸ್ ಗೆ ಬ್ಯಾಡ್ ನ್ಯೂಸ್: ಮತ್ತೊಬ್ಬ ಕನ್ನಡತಿಯೊಂದಿಗೆ ಪ್ರಭಾಸ್ ರೊಮ್ಯಾನ್ಸ್!

ಹೈದರಾಬಾದ್: ಟಾಲಿವುಡ್ ದೇವಸೇನಾ ಕನ್ನಡತಿ ಅನುಷ್ಕಾ ಶೆಟ್ಟಿ ಅಭಿಮಾನಿಗಳೊಂದಿಗೆ ಬ್ಯಾಡ್ ನ್ಯೂಸ್ ಸಿನಿ ಅಂಗಳದಿಂದ ಹೊರ ಬಿದ್ದಿದೆ. ಸಾಹೋ ಸಿನಿಮಾದಲ್ಲಿ ಅನುಷ್ಕಾ ಮತ್ತು ಪ್ರಭಾಸ್ ಜೊತೆಯಾಗಿ ನಟಿಸಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಅನುಷ್ಕಾ ಜಾಗಕ್ಕೆ ಬಾಲಿವುಡ್‍ನ ಆಶಿಕಿ ಬೆಡಗಿ ಶ್ರದ್ಧಾ ಕಪೂರ್ ಎಂಟ್ರಿ ಪಡೆದರು. ಮತ್ತೆ ಯಾವಾಗ ಪ್ರಭಾಸ್-ಅನುಷ್ಕಾ ಇಬ್ಬರನ್ನು ತೆರೆ ಮೇಲೆ ನೋಡುತ್ತೇವೆ ಎಂದು ತುದಿಗಾಲಲ್ಲಿ ಕಾಯುತ್ತಿದ್ದ ಅಭಿಮಾನಿಗಳಿಗೆ ಸ್ಯಾಡ್ ನ್ಯೂಸ್ ಸಿಕ್ಕಿದೆ.

ಮತ್ತೊಬ್ಬ ಕನ್ನಡತಿ ಎಂಟ್ರಿ: ಸಾಹೋ ಚಿತ್ರದ ನಂತರ ಪ್ರಭಾಸ್ ನಟಿಸುವ ಸಿನಿಮಾಗೆ ಅನುಷ್ಕಾ ಬರಲಿದ್ದಾರೆ ಎಂಬ ಮಾತುಗಳು ಟಾಲಿವುಡ್‍ನ ಗಲ್ಲಿ ಗಲ್ಲಿಗಳಲ್ಲಿ ಹರಿದಾಡಿದ್ದವು. ಈಗ ಬಂದಿರುವ ಸುದ್ದಿ ಪ್ರಕಾರ ಪ್ರಭಾಸ್ ಜೊತೆ ನಟಿಸಲು ಕನ್ನಡತಿ, ಮಂಗಳೂರು ಬೆಡಗಿ ಪೂಜಾ ಹೆಗ್ಡೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ.

2016ರಲ್ಲಿ ತೆರೆಕಂಡ ಬಾಲಿವುಡ್‍ನ ಹೃತಿಕ್ ರೋಷನ್ ನಟನೆಯ ‘ಮೊಹೆಂಜೋದಾರೋ’ ಚಿತ್ರದ ಮೂಲಕ ಪೂಜಾ ಹೆಗ್ಡೆ ಸಿನಿ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು. ಸಾಹೋ ಸಿನಿಮಾದ ಬಳಿಕ ಪ್ರಭಾಸ್, ನಿರ್ದೇಶಕ ರಾಧಾ ಕೃಷ್ಣ ಮೋಹನ್ ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ. ಈಗಾಗಲೇ ನಿರ್ದೇಶಕರು ನಟಿ ಪೂಜಾ ಹೆಗ್ಡೆ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಅಂತಾ ಹೇಳಲಾಗುತ್ತಿದೆ. ಒಂದು ವೇಳೆ ಪೂಜಾ ಹೆಗ್ಡೆ ಸಿನಿಮಾ ಒಪ್ಪಿಕೊಂಡರೆ ಅನುಷ್ಕಾ ಅಭಿಮಾನಿಗಳಿಗೆ ಬೇಸರವಾಗುವುದು ಖಂಡಿತ.

ಸುಜೀತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಸಾಹೋ’ ಸಿನಿಮಾದ ಚಿತ್ರೀಕರಣದಲ್ಲಿ ಪ್ರಭಾಸ್ ಬ್ಯೂಸಿಯಾಗಿದ್ದಾರೆ. ಸಾಹೋ ಸಿನಿಮಾದ ಮೂಲಕ ಶ್ರದ್ಧಾ ಕಪೂರ್ ಟಾಲಿವುಡ್‍ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ನೀಲ್ ನಿತಿನ್ ಮುಖೇಶ್, ಜಾಕಿ ಶ್ರಾಫ್, ಚುಂಕಿ ಪಾಂಡ್ಯಾ ಮತ್ತು ಮಂದಿರಾ ಬೇಡಿ ಸೇರಿದಂತೆ ದೊಡ್ಡ ಅನುಭವಿ ಕಲಾವಿದರನ್ನು ಚಿತ್ರ ಹೊಂದಿದೆ.

 

Leave a Reply

Your email address will not be published. Required fields are marked *