Monday, 20th November 2017

Recent News

ತಂದೆಯ ಸಾವಿನ ಸುದ್ದಿಯನ್ನು ತಿಳಿಸಲು ಬಿಡದ ಜೈಲು ಅಧಿಕಾರಿಗಳು!

ಬೆಂಗಳೂರು: ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯೊಬ್ಬರ ತಂದೆಯ ಸಾವಿನ ಸುದ್ದಿ ತಿಳಿಸಲು ಬಂದ ಪತ್ನಿಯನ್ನು ಒಳಗಡೆ ಬಿಡದೇ ಕಾರಗೃಹದ ಪೊಲೀಸ್ ಸಿಬ್ಬಂದಿ ಅಮಾನವೀಯತೆಯನ್ನು ಪ್ರದರ್ಶಿಸಿದ ವಿಚಾರ ಈಗ ಬೆಳಕಿಗೆ ಬಂದಿದೆ.

ತುಮಕೂರಿನ ಬೆಳ್ಳಾವಿ ಗ್ರಾಮದ ನಿವಾಸಿ ರಾಜಣ್ಣ ಎಂಬವರು ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದಾರೆ. ಶನಿವಾರ ರಾಜಣ್ಣರ ತಂದೆ ಸಾವನ್ನಪ್ಪಿದ್ದು, ಈ ಸಂಬಂಧ ರಾಜಣ್ಣ ಪತ್ನಿ ಅರುಣಾ ಮತ್ತು ನಾದಿನಿ ಪ್ರೇಮಾ ಇಂದು ಜೈಲಿಗೆ ಆಗಮಿಸಿದ್ದರು. ಬೆಳಗ್ಗೆಯಿಂದ ಅರುಣಾ ಅವರು ಪತಿಯನ್ನು ಭೇಟಿಯಾಗಲು ಸಾಕಷ್ಟು ಪ್ರಯತ್ನಿಸಿದ್ರೂ ಸಾಧ್ಯವಗಲೇ ಇಲ್ಲ. ಕೊನೆ ಪಕ್ಷ ನೀವಾದ್ರೂ ರಾಜಣ್ಣನಿಗೆ ತಂದೆಯ ಸಾವಿನ ಸುದ್ದಿಯನ್ನು ತಿಳಿಸಿ ಎಂದು ಬೇಡಿಕೊಂಡ್ರು ಪೊಲೀಸರು ಕ್ಯಾರೆ ಅಂದಿಲ್ಲ.

ಕಳೆದ ಎರಡು ದಿನದಿಂದ ಜೈಲಿನಲ್ಲಿ ಗಲಾಟೆ ನಡಿತಿದೆ, ಅದ್ರಲ್ಲು ಇವತ್ತು ಭಾನುವಾರ ನಿನ್ನ ಗಂಡನನ್ನ ನೋಡೊಕೆ ಆಗಲ್ಲ ಅಂತ ಹೇಳಿ ಪೊಲೀಸರು ಕೈ ತೊಳೆದುಕೊಂಡಿದ್ದಾರೆ. ಇನ್ನು ರಾಜಣ್ಣ ಸಂಬಂಧಿಗಳು ಮಾವನ ಅಂತ್ಯ ಸಂಸ್ಕಾರಕ್ಕೆ ಬರ ಬೇಕಾದ್ರೆ ರಾಜು ಜೊತೆ ಬರಬೇಕು ಅಂತ ಪತ್ನಿ ಅರುಣಾಗೆ ಒತ್ತಡ ಹೇರಿದ್ದಾರೆ. ಕೆಲವು ದಿನಗಳ ಹಿಂದೆ ನಡೆದ ಸಣ್ಣ ಗಲಾಟೆಯಲ್ಲಿ ಕೊಡಿಗೆಹಳ್ಳಿ ಪೊಲೀಸರು ರಾಜಣ್ಣನನ್ನ ವಶಕ್ಕೆ ಪಡೆದು ಬಂಧಿಸಿದ್ದರು.

Leave a Reply

Your email address will not be published. Required fields are marked *