Thursday, 24th May 2018

Recent News

 ಕಂಡಕ್ಟರ್-ಪೊಲೀಸರ ನಡುವೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲೇ ಕಿತ್ತಾಟ

ಹಾಸನ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ನಲ್ಲಿ ಟಿಕೆಟ್ ವಿಚಾರವಾಗಿ ಪೊಲೀಸರು ಮತ್ತು ನಿರ್ವಾಹಕನ ನಡುವೆ ಜಗಳವಾಗಿ, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬರಾಳು ಗ್ರಾಮದ ಬಳಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಭಾನುವಾರ ಶ್ರವಣಬೆಳಗೊಳ ಚನ್ನರಾಯಪಟ್ಟಣ ನಡುವೆ ಸಂಚರಿಸುವ ಬಸ್ ನಲ್ಲಿ ಈ ಜಗಳ ನಡೆದಿದೆ. ನಿರ್ವಾಹಕ ಸೋಮಶೇಖರ್ ಟಿಕೆಟ್ ಕೇಳಿದ್ದಕ್ಕೆ ನಾಲ್ವರು ಪೊಲೀಸರು ಅವಾಚ್ಯ ಪದ ಬಳಸಿದ್ದು, ಈ ದೃಶ್ಯವನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.

ಕಂಡಕ್ಟರ್ ಅನುಚಿತ ವರ್ತನೆ ಮತ್ತು ಪೊಲೀಸರ ದೌರ್ಜನ್ಯ ಎರಡನ್ನೂ ನೋಡುತಿದ್ದ ಬಸ್ ಪ್ರಯಾಣಿಕರು ಮಾತ್ರ ಮೂಕಪ್ರೇಕ್ಷಕರಾಗಿದ್ದರು.

Leave a Reply

Your email address will not be published. Required fields are marked *