ಗಾಬರಿ ಸಹಜ, ಆದ್ರೆ ಬೇರೆ ರೀತಿ ಸುದ್ದಿ ಕೊಡಬೇಡಿ: ಶಿವರಾಜ್ ಕುಮಾರ್

ಬೆಂಗಳೂರು: ಅಮ್ಮ ವೆಂಟಿಲೇಟರ್‍ನಲ್ಲಿದ್ದಾರೆ ಅಂದ್ರೆ ನಮ್ಗೂ ಭಯ ಇದೆ. ಗಾಬರಿ ಸಹಜ, ಆದ್ರೇ ಬೇರೆ ರೀತಿ ಸುದ್ದಿ ಕೊಡಬೇಡಿ ಅಂತಾ ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು, ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆಗಿಂತ ಇಂದು ಅಮ್ಮಾ ಬೆಟರ್ ಇದ್ದಾರೆ ಅಂತಾ ವೈದ್ಯರು ಹೇಳಿದ್ದಾರೆ. ಆದ್ರೆ ವೆಂಟಿಲೇಟರ್‍ನಿಂದ ಹೊರಗೆ ಬಂದ ಮೇಲೆ ಔಟ್ ಆಫ್ ಡೇಂಜರಸ್ ಅನ್ನಬಹುದು ಅಂತಾ ಅವರು ಹೇಳಿದ್ರು.

ಕೃತಕ ಉಸಿರಾಟಕ್ಕಾಗಿ ವೆಂಟಿಲೇಟರ್ ನಲ್ಲಿ ಅಮ್ಮನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವೆಂಟಿಲೇಟರ್ ಅಂದ್ರೆ ನಮಗೂ ಗಾಬರಿಯಾಯಿತು. ಯಾಕಂದ್ರೆ ಎಷ್ಟಾದ್ರೂ ನಮ್ಮಮ್ಮ ತಾನೇ ಅಂತಾ ಭಾವುಕರಾದ್ರು.

ವೆಂಟಿಲೇಟರ್ ನಿಂದ ಹೊರಬಂದ ಬಳಿಕ ಅಮ್ಮನ ಆರೋಗ್ಯದ ಬಗ್ಗೆ ಖಚಿತವಾಗಿ ಹೇಳಬಹುದು. ಅದಕ್ಕಿಂತ ಮೊದಲು ಯಾವುದೇ ಕಾರಣಕ್ಕೂ ಸುದ್ದಿಗಳನ್ನು ಹರಡಿಸಬೇಡಿ ಅಂತಾ ಹೇಳಿದ್ರು.

ಅಮ್ಮನ ಆರೋಗ್ಯದ ಬಗ್ಗೆ ನಿಮ್ಮ ಪ್ರಾರ್ಥನೆ ಅಗತ್ಯ ಅಂತಾ ರಾಘವೇಂದ್ರ ರಾಜ್ ಕುಮಾರ್ ಇದೇ ವೇಳೆ ತಿಳಿಸಿದ್ರು.

ಉಸಿರಾಟದ ತೊಂದರೆಯಿಂದಾಗಿ ದಿವಂಗತ ಡಾ. ರಾಜ್ ಕುಮಾರ್ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಅವರನ್ನು ಸೋಮವಾರ ನಗರದಲ್ಲಿ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಇಂದು ಅವರ ಆರೋಗ್ಯ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

You might also like More from author

Leave A Reply

Your email address will not be published.

badge