Sunday, 22nd April 2018

ಯಾದಗಿರಿ: ಹೆತ್ತ ತಾಯಿಯನ್ನೇ ಕೊಲೆಗೈದ ಪಾಪಿ ಮಗ

ಯಾದಗಿರಿ: ಮಗನೊಬ್ಬ ತನ್ನ ಹೆತ್ತತಾಯಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತಿಪ್ಪಮ್ಮ ಎಂಬವರೇ ಮಗನಿಂದ ಕೊಲೆಯಾದ ತಾಯಿ. ತಿಪ್ಪಮ್ಮರ ಮಗ ಈಶ್ವರಪ್ಪ ಈ ಕೃತ್ಯವೆಸಗಿದ್ದಾನೆ. ಜುಲೈ 7ರಂದು ಈಶ್ವರಪ್ಪ ತಾಯಿಯನ್ನು ಕೊಲೆ ಮಾಡಿದ್ದು, ಕೆಳಗೆ ಬಿದ್ದು ಅಮ್ಮ ಮೃತಪಟ್ಟಿದ್ದಾರೆಂದು ಸಂಬಂಧಿಕರಿಗೆ ತಿಳಿಸಿ ಅಂತ್ಯಸಂಸ್ಕಾರ ಸಹ ಮಾಡಿದ್ದ.

ಈಶ್ವರಪ್ಪನ ನಡುವಳಿಕೆಯಿಂದ ಅನುಮಾನಗೊಂಡ ತಿಪ್ಪಮ್ಮರ ಸಹೋದರ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈಶ್ವರಪ್ಪ ತಾಯಿಯನ್ನು ಸಾಕಲಾಗದೇ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಅಣ್ಣನ ಗುಂಡೇಟಿಗೆ ತಮ್ಮ ಬಲಿ: ಕೊಡಗಿನಲ್ಲಿ ಅಮಾನವೀಯ ಘಟನೆ

ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಸಹಾಯಕ ಆಯುಕ್ತ ಡಾ.ಜಗದೀಶ ಹಾಗೂ ಶಹಾಪುರ ಪೊಲೀಸರ ನೇತೃತ್ವದಲ್ಲಿ ಹೂತಿರುವ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಸಂಬಂಧ ಆರೋಪಿ ಈಶ್ವರಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 

 

Leave a Reply

Your email address will not be published. Required fields are marked *