Sunday, 24th June 2018

Recent News

ಚಾಂಪಿಯನ್ಸ್ ಟ್ರೋಫಿ ಫೈನಲ್: ಭಾರತಕ್ಕೆ 339 ರನ್ ಟಾರ್ಗೆಟ್

 

ಓವೆಲ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಟೀಂ ಇಂಡಿಯಾದ ಗೆಲುವಿಗೆ ಪಾಕಿಸ್ತಾನ 339 ರನ್‍ಗಳ ಗುರಿಯನ್ನು ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ಫಖರ್ ಜಮಾನ್ ಶತಕ ಮತ್ತು ಅಜರ್ ಅಲಿ ಅವರ ಅರ್ಧಶತಕದಿಂದಾಗಿ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿದೆ.

ಶತಕದ ಜೊತೆಯಾಟ: ಆರಂಭಿಕ ಆಟಗಾರರಾದ ಫಕರ್ ಜಮಾನ್ ಮತ್ತು ಅಜರ್ ಅಲಿ 138 ಎಸೆತಗಳಲ್ಲಿ 128 ರನ್ ಜೊತೆಯಾಟವಾಡುವ ಮೂಲಕ ಪಾಕ್ ಇನ್ನಿಂಗ್ಸ್ ಗೆ ಭದ್ರ ಅಡಿಪಾಯ ಹಾಕಿದರು. 61 ಎಸೆತಗಳಲ್ಲಿ ಅರ್ಧಶತಕಗಳಿಸಿದ್ದ ಅಜರ್ ಅಲಿ 59 ರನ್(71 ಎಸೆತ, 6 ಬೌಂಡರಿ, 1 ಸಿಕ್ಸರ್) ಗಳಿಸಿದ್ದಾಗ ರನ್‍ಔಟ್ ಆದರು.

ಫಖರ್ ಜಮಾನ್ ಶತಕ: 4ನೇ ಪಂದ್ಯವನ್ನು ಆಡುತ್ತಿರುವ ಫಖರ್ ಜಮಾನ್ 92 ಎಸೆತದಲ್ಲಿ ಮೊದಲ ಶತಕ ಹೊಡೆದರು. ಅಂತಿಮವಾಗಿ 114 ರನ್(106 ಎಸೆತ, 12 ಬೌಂಡರಿ, 3 ಸಿಕ್ಸರ್) ಗಳಿಸಿದ್ದಾಗ ಪಾಂಡ್ಯ ಎಸೆತದಲ್ಲಿ ಜಡೇಜಾಗೆ ಕ್ಯಾಚ್ ನೀಡಿ ಔಟಾದರು.

ನಂತರ ಬಂದ ಬಾಬರ್ ಅಜಂ 46 ರನ್‍ಗಳಿಸಿದರೆ ಶೋಯಬ್ ಮಲಿಕ್ 12 ರನ್‍ಗಳಿಸಿ ಔಟಾದರು. ಕೊನೆಯಲ್ಲಿ ಮುರಿಯದ 5ನೇ ವಿಕೆಟಿಗೆ 45 ಎಸೆತಗಳಲ್ಲಿ ಮೊಹಮ್ಮದ್ ಹಫೀಸ್ ಮತ್ತು ಇಮಾದ್ ವಾಸಿಂ 71 ರನ್ ಗಳನ್ನು ಕಲೆ ಹಾಕಿ ತಂಡದ ಮೊತ್ತವನ್ನು 300 ರನ್‍ಗಳ ಗಡಿ ದಾಟಿಸಿದರು.

ಮೊಹಮ್ಮದ್ ಹಫೀಸ್ ಔಟಾಗದೇ 57 ರನ್(37 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿದರೆ, ಇಮಾದ್ ವಾಸೀಂ ಔಟಾಗದೇ 25 ರನ್(21 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದರು.

ಭಾರತದ ಪರವಾಗಿ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್ ವಿಕೆಟ್ ಪಡೆದರು. ಇತರೇ ರೂಪದಲ್ಲಿ ಭಾರತ ರನ್ ನೀಡಿತ್ತು

ಪಾಕ್ ರನ್ ಏರಿದ್ದು ಹೇಗೆ?
50 ರನ್ – 9.2 ಓವರ್
100 ರನ್ – 17.6 ಓವರ್
150 ರನ್ – 25.6 ಓವರ್
200 ರನ್ – 32.5 ಓವರ್
250 ರನ್ – 40.1 ಓವರ್
300 ರನ್ – 45.2 ಓವರ್
338 ರನ್ – 50 ಓವರ್

 

 

Leave a Reply

Your email address will not be published. Required fields are marked *