ದೇಶದಲ್ಲಿ ಅಸಹಿಷ್ಣುತೆ; ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸ್ವೀಕರಿಸದೇ ಇರಲು ಜಿ.ರಾಜಶೇಖರ್ ನಿರ್ಧಾರ

ಉಡುಪಿ: ಖ್ಯಾತ ವಿಮರ್ಶಕ ಜಿ. ರಾಜಶೇಖರ್ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸದೇ ಇರಲು ನಿರ್ಧರಿಸಿದ್ದಾರೆ.

ದೇಶಾದ್ಯಂತ ಇರುವ ಅಸಹಿಷ್ಣುತೆಯ ಪರಿಸ್ಥಿತಿ ಇನ್ನೂ ಬದಲಾಗಿಲ್ಲ. ಹೀಗಾಗಿ ನಾನು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸ್ವೀಕರಿಸಲಾರೆ ಎಂದು ಪ್ರಶಸ್ತಿಯಿಂದ ದೂರ ಸರಿದಿದ್ದಾರೆ.

ಸರ್ಕಾರ ತೋರಿರುವ ಗೌರವಕ್ಕೆ ನಾನು ಕೃತಜ್ಞನಾಗಿದ್ದೆನೆ. ಆದ್ರೆ ದೇಶದ ಪರಿಸ್ಥಿತಿ 2015 ರೀತಿಯಲ್ಲೇ ಇನ್ನೂ ಇದೆ. ಆ ಕಾಲದಲ್ಲಿ ಹಲವಾರು ಮಂದಿ ದೇಶಾದ್ಯಂತ ಪ್ರಶಸ್ತಿ ವಾಪಾಸ್ ಮಾಡಿದ್ದರು. ಅದರ ಮುಂದುವರಿದ ಭಾಗವಾಗಿ ನಾನು ಅವರಂತೆಯೇ ಪ್ರಶಸ್ತಿಯನ್ನು ವಾಪಾಸ್ ಮಾಡುತ್ತಿದ್ದೇನೆ ಎಂದು ಜಿ. ರಾಜಶೇಖರ್ ಹೇಳಿದ್ದಾರೆ.

ತನ್ನ ಬಹುವಚನ ಭಾರತ ಎಂಬ ಕೃತಿಗೆ 2015ರ ಸಾಲಿನ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತು. ಸದ್ಯ ಜಿ.ರಾಜಶೇಖರ್ ಅವರು ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

LEAVE A REPLY