ಬರೋಬ್ಬರಿ 60 ಲಕ್ಷ ವ್ಯೂ ಕಂಡಿರೋ ವಧುವಿನ ವೈರಲ್ ಡ್ಯಾನ್ಸ್ ವೀಡಿಯೋ ನೋಡಿ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮದುವೆ ಮಂಟಪದಲ್ಲಿ ವರ ತನ್ನ ಸ್ನೇಹಿತರೊಂದಿಗೆ ಹೆಜ್ಜೆ ಹಾಕೋದನ್ನ ನೋಡಿರ್ತಿವಿ. ಆದ್ರೆ ಇಲ್ಲೊಬ್ಬಳು ವಧು ತನ್ನ ಭಾವಿ ಪತಿಯನ್ನು ಎದುರು ಕುಳ್ಳಿರಿಸಿಕೊಂಡು ತನ್ನ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಹೆಜ್ಜೆ ಹಾಕಿರೋ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

17 ನಿಮಿಷ ಇರೋ ಈ ವಿಡಿಯೋದಲ್ಲಿ ವಧುವು ತನ್ನ ಗೆಳೆಯ-ಗೆಳತಿ, ಅಪ್ಪ-ಅಮ್ಮ ಅಜ್ಜಿ-ತಾತ ಹೀಗೆ ಎಲ್ಲರೊಂದಿಗೆ ಒಂದೊಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಳೆದ ಜನವರಿಯಲ್ಲಿ ಈ ವಿಡಿಯೋ ಯೂಟ್ಯೂಬ್‍ಗೆ ಅಪ್‍ಲೋಡ್ ಆಗಿದ್ದು, ಇಲ್ಲಿಯವರೆಗೆ ಸುಮಾರು 60 ಲಕ್ಷ ಜನ ವೀಕ್ಷಿಸಿದ್ದಾರೆ. ಆದ್ರೆ ಈ ವಿಡಿಯೋ ಎಲ್ಲಿಯದ್ದು ಅನ್ನೋದರ ಬಗ್ಗೆ ಮಾಹಿತಿಯಿಲ್ಲ.

ವಧು ಹೆಜ್ಜೆ ಹಾಕಲು ಆರಂಭಿಸಿದಾಗ ಇತ್ತ ವರ ನಾಚಿಕೆಯಿಂದ ಆಕೆಯನ್ನು ನೋಡುತ್ತಿದ್ದ. ಕೂಡಲೇ ವಧುವಿನ ಸ್ನೇಹಿತರು, ಸಹೋದರರು ಆಕೆಯೊಂದಿಗೆ ಹೆಜ್ಜೆ ಹಾಕಿದ್ದಾರೆ. ಹಿಂದಿ ಹಾಡುಗಳಿಗೆ ಈಕೆ ಸಖತ್ ಆಗಿ ಸ್ಟೆಪ್ ಹಾಕಿದ್ದಾಳೆ.

ಈಕೆ ನೃತ್ಯ ಮಾಡುತ್ತಿದ್ದ ವೇಳೆ ಪುಟ್ಟು ಬಾಲಕನೋರ್ವ ಗುಲಾಬಿ ಹಿಡಿದುಕೊಂಡು ವಧುವಿಗೆ ನೀಡಿದ್ದಾನೆ. ವಿಡಿಯೋದಲ್ಲಿ ಬಂಧು-ಬಳಗದವರೆಲ್ಲರೂ ಒಟ್ಟಿಗೆ ಜೊತೆಯಾಗಿ ಕೊನೆಗೆ ವಧುವಿನೊಂದಿಗೆ ಹೆಜ್ಜೆ ಹಾಕಿರುವುದನ್ನು ನಾವು ನೋಡಬಹುದು.

You might also like More from author

Leave A Reply

Your email address will not be published.

badge