Wednesday, 23rd May 2018

Recent News

ಓಲಾ ಕ್ಯಾಬ್ ಡ್ರೈವರ್ ನಿಂದ ಯುವತಿಗೆ ಲೈಂಗಿಕ ಕಿರುಕುಳ!

ಬೆಂಗಳೂರು: ಡ್ರಾಪ್ ಮಾಡುವ ನೆಪದಲ್ಲಿ ಓಲಾ ಕ್ಯಾಬ್ ಚಾಲಕ ನೇಪಾಳ ಮೂಲದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಗರದ ಹೆಬ್ಬಾಳದ ಎಸ್ಟೀಮ್ ಮಾಲ್ ಬಳಿ ನಡೆದಿದೆ.

ಯುವತಿ ಕಾರಿನಲ್ಲಿರುವಾಗ ಕತ್ತಲಿರುವ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದಾನೆ. ಅಲ್ಲದೇ ಒಂಟಿಯಾಗಿರುವ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಡ್ರೈವರ್ ವರ್ತನೆ ನೋಡಿದ ಯುವತಿ ಕೂಡಲೇ ಕಾರಿನಿಂದ ಇಳಿದು ಜನ ಸಂದಣಿಯಿರುವ ಸ್ಥಳಕ್ಕೆ ಬಂದಿದ್ದಾರೆ.

ಡ್ರೈವರ್ ನೀಡಿರುವ ಕಿರುಕುಳ ಕುರಿತು ಯುವತಿ ಸ್ಥಳೀಯರಿಗೆ ತಿಳಿಸಿದಾಗ, ಕಾಮುಕ ಚಾಲಕನನ್ನು ಸಾರ್ವಜನಿಕರು ಥಳಿಸಿದ್ದಾರೆ. ಈ ಸಂಬಂಧ ಯುವತಿ ಓಲಾ ಡ್ರೈವರ್ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *