Thursday, 22nd March 2018

ಮೊದಲ ಪಟ್ಟಿಯಲ್ಲಿ ಪ್ರಜ್ವಲ್ ರೇವಣ್ಣಗಿಲ್ಲ ಟಿಕೆಟ್- ಅನಿತಾ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಇನ್ನೂ ಸಸ್ಪೆನ್ಸ್

ಬೆಂಗಳೂರು: ಬಿಜೆಪಿ, ಕಾಂಗ್ರೆಸ್‍ಗಿಂತ ಮೊದಲೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿರುವ ಜೆಡಿಎಸ್, ಕುಟುಂಬ ಸದಸ್ಯರಿಗೆ ಯಾವುದೇ ಟಿಕೆಟ್ ನೀಡದ ಮುನ್ಸೂಚನೆ ನೀಡಿದೆ.

ಬೇಲೂರು ಕ್ಷೇತ್ರದ ಪ್ರಮುಖ ಆಕಾಂಕ್ಷಿಯಾಗಿದ್ದ ಪ್ರಜ್ವಲ್ ರೇವಣ್ಣಗೆ ನೋ ಎಂದಿರುವ ಜೆಡಿಎಸ್ ಹೈಕಮಾಂಡ್, ಲಿಂಗೇಶ್ ಎಂಬವರಿಗೆ ಟಿಕೆಟ್ ಘೋಷಣೆ ಮಾಡಿದೆ. ಇಷ್ಟರ ನಡುವೆ ಜೆಡಿಎಸ್ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಗೌಪ್ಯತೆಯನ್ನ ಕಾಯ್ದುಕೊಂಡಿದೆ. ಅನಿತಾ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಸ್ಪರ್ಧಿಸ್ತಾರೋ ಇಲ್ಲವೋ ಎಂಬುದು ಇನೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ಇದನ್ನೂ ಓದಿ: ಪ್ರಾದೇಶಿಕ ಪಕ್ಷದ ಶಕ್ತಿ ಕೇಂದ್ರಕ್ಕೆ ತಿಳಿಸಬೇಕಿದೆ, ನನಗೊಂದು ಅವಕಾಶ ಕೊಡಿ: ಕುಮಾರಸ್ವಾಮಿ

ಹಾಸ್ಯ ನಟ ದೊಡ್ಡಣ್ಣ ಅವರ ಅಳಿಯ ಕೆಸಿ ವೀರೇಂದ್ರರನ್ನ ಚಿತ್ರದುರ್ಗ ಕ್ಷೇತ್ರದಿಂದ ಕಣಕ್ಕಿಳಿಸಿದೆ. ವೀರೇಂದ್ರ ಬಾತ್ ರೂಂ ಲಾಕರ್‍ನಲ್ಲಿ ಕೋಟ್ಯಾಂತರ ರೂಪಾಯಿಯ ಹಣ ಬಚ್ಚಿಟ್ಟು ಐಟಿ ಅಧಿಕಾರಿಗಳ ದಾಳಿಗೆ ತುತ್ತಾಗಿದ್ದರು. ಇದರ ಜೊತೆ ಹಾಲಿ ಎಲ್ಲಾ ಎಂಎಲ್‍ಎಗಳಿಗೂ ಟಿಕೆಟ್ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್-ಬಿಜೆಪಿ ಎರಡೂ ಒಂದೇ ಮುಖದ ಪಕ್ಷ: ಮಾಯಾವತಿ

Leave a Reply

Your email address will not be published. Required fields are marked *