Sunday, 27th May 2018

Recent News

ಬಿಎಸ್‍ವೈ ಕಣ್ಣು ತೆರೆಸಿದ 9 ವರ್ಷದ ಬಾಲಕಿ

ಚಾಮರಾಜನಗರ: ಜಿಲ್ಲೆಯಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಕಾರ್ಯಕ್ರಮದ ವೇಳೆ ಬಾಲಕಿಯೊಬ್ಬಳು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರಿಗೆ ಪತ್ರ ನೀಡುವ ಮೂಲಕ ಕಣ್ಣು ತೆರೆಸಿದ್ದಾಳೆ.

ಕಾರ್ಯಕ್ರಮ ನಡೆಯುವ ವೇಳೆ ಚಾಮರಾಜನಗರ ತಾಲೂಕಿನ ಬಂದಿಗೌಡನಹಳ್ಳಿ ಗ್ರಾಮದ ಕುಮಾರ್ ಎಂಬವರ 9 ವರ್ಷದ ಪುತ್ರಿ ಪ್ರೀತಿ ಯಡಿಯೂರಪ್ಪ ಅವರಿಗೆ ಪತ್ರವೊಂದನ್ನು ನೀಡಿದಳು. ನಂತರ ವೇದಿಕೆಯಲ್ಲಿ ಭಾಷಣ ಮಾಡುವ ವೇಳೆ ಬಿಎಸ್‍ವೈ ಬಾಲಕಿ ನೀಡಿದ ಪತ್ರವನ್ನು ಪ್ರಸ್ತಾಪಿಸಿದರು.

ರಾಜ್ಯದಲ್ಲಿ ಬಿಜೆಪಿ ಮಾಡಿದ ಅಭಿವೃದ್ಧಿ ಕೆಲಸ, ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಭ್ರಷ್ಟಾಚಾರ, ಅಧಿಕಾರಿಗಳಿಗೆ ನೀಡುತ್ತಿರುವ ಕಿರುಕುಳ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯನ್ನು ಪರಿವರ್ತನಾ ಯಾತ್ರೆಯಲ್ಲಿ ಏಕೆ ಹೇಳುತ್ತಿಲ್ಲ ಎಂದು ಬಾಲಕಿ ಪತ್ರದಲ್ಲಿ ಹೇಳಿದ್ದು. ಈ ಅಂಶಗಳನ್ನು ಬಿಜೆಪಿ ಪರಿವರ್ತನಾ ಯಾತ್ರೆಯ ವೇಳೆ ಹೇಳಿ ಜನರಿಗೆ ಮಾಹಿತಿ ನೀಡಿ ಎಂದು ಆ ಪುಟ್ಟ ಬಾಲಕಿ ಹೇಳಿದ್ದಾಳೆ. ಈ ಮೂಲಕ ನನ್ನ ಕಣ್ಣುಗಳನ್ನು ಆಕೆ ತೆರಸಿದ್ದಾಳೆ ಎಂದು ಬಿಎಸ್ ವೈ ಬಾವುಕರಾದರು.

ಬಾಲಕಿಯ ಪತ್ರದ ಸಾರಾಂಶವನ್ನು ಸ್ಥಳದಲ್ಲೇ ಓದಿದ ಬಿಎಸ್‍ವೈ, ಸಿಎಂ ಸಿದ್ದರಾಮಯ್ಯ ಸರ್ಕಾರದ ವೈಪಲ್ಯಗಳ ಪಟ್ಟಿಯನ್ನು ತಿಳಿಸಿದರು. ಐಪಿಎಸ್ ಅಧಿಕಾರಿ ಡಿಕೆ ರವಿ ಸಾವಿನ ಪ್ರಕರಣ, ಬಳ್ಳಾರಿ ಡಿವೈಎಸ್‍ಪಿ ಅನುಪಮಾ ಶಣೈ ರಾಜೀನಾಮೆ, ಮಡಿಕೇರಿ ಡಿವೈಎಸ್‍ಪಿ ಗಣಪತಿ ಹತ್ಯೆ, ಬಾಗಲಕೋಟೆ ಜಿಲ್ಲೆ ಎಸ್ ವೈ ಮೇಟಿ ಪ್ರಕರಣಗಳಲ್ಲಿ ನ್ಯಾಯವನ್ನು ನೀಡಿ. ಅಲ್ಲದೇ ಅನ್ನಭಾಗ್ಯ ಹೆಸರಿನಲ್ಲಿ ಜನರನ್ನು ಮೋಸ ಮಾಡುತ್ತಿರುವ ಕುರಿತು ಯಾತ್ರೆಯಲ್ಲಿ ಪ್ರಸ್ತಾಪಿಸಿ ಎಂಬ ಹಲವು ಅಂಶಗಳ ಕುರಿತು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಬಾಲಕಿಯ ಜಾಣ್ಮೆಯನ್ನು ಪ್ರಶಂಸಿದ ಬಿಎಸ್‍ವೈ ಅವರು ಮುಂದಿನ ಯಾತ್ರೆಗಳಲ್ಲಿ ಈ ಎಲ್ಲಾ ಅಂಶಗಳನ್ನು ಪ್ರಸ್ತಾಪಿಸುದಾಗಿ ತಿಳಿಸಿದರು.

Leave a Reply

Your email address will not be published. Required fields are marked *