Monday, 18th June 2018

Recent News

ಕಿಶೋರ್ ಕುಮಾರ್ ಹಾಡಿಗೆ ಧ್ವನಿ ನೀಡಿದ ರೈನಾ- ವಿಡಿಯೋ ನೋಡಿ

ಕೊಲಂಬೊ: ಹಲವು ದಿನಗಳ ಬಳಿಕ ಶ್ರೀಲಂಕಾದಲ್ಲಿ ನಡೆಯುತ್ತಿರುವ ನಿದಾಸ್ ತ್ರಿಕೋನ ಕ್ರಿಕೆಟ್ ಸರಣಿಗೆ ಕಮ್ ಬ್ಯಾಕ್ ಮಾಡಿರುವ ಸುರೇಶ್ ರೈನಾ ತಮ್ಮ ಬ್ಯಾಟಿಂಗ್ ನಿಂದ ಆಯ್ಕೆಗಾರರ ಗಮನ ಸೆಳೆದರೆ, ಮೈದಾನದ ಹೊರಗೆ ಗಾಯನ ಮೂಲಕ ಟೀಂ ಇಂಡಿಯಾ ಆಟಗಾರರನ್ನು ರಂಜಿಸಿದ್ದಾರೆ.

ಬಾಲಿವುಡ್ ನ ಗಾಯಕ ಕಿಶೋರ್ ಕುಮಾರ್ ಆಡಿರುವ ಜನಪ್ರಿಯ ‘ಯೇ ಶಾಮ್ ಮಸ್ತಾನಿ ಮಧೋಶ್ ಕಿಯೆ ಜಾಯೆ’ ಹಾಡನ್ನು ಟೀಂ ಇಂಡಿಯಾ ಆಟಗಾರರ ಸಮ್ಮಖದಲ್ಲಿ ಹಾಡಿ ಗಮನಸೆಳೆದಿದ್ದಾರೆ. ಈ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತ್ರಿಕೋನ ಸರಣಿಯಲ್ಲಿ ಸೋಮವಾರ ಟೀಂ ಇಂಡಿಯಾ ಶ್ರೀಲಂಕಾ ತಂಡವನ್ನು ಎದುರಿಸುತ್ತಿದ್ದು, ರೈನಾ ವಿರಾಮದ ವೇಳೆಯಲ್ಲಿ ಹಾಡುಗಾರಿಕೆ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ರೈನಾ ಅವರ ಹಾಡುಗಾರಿಗೆ ಬಗ್ಗೆ ಈಗಾಗಲೇ ಅಭಿಮಾನಿಗಳಿಗೆ ತಿಳಿದಿದ್ದು, ಈ ಹಿಂದೆ ತಮ್ಮ ಗಾಯನದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಬಾಲಿವುಡ್ ನ `ಮಿರುಥಿಯಾ ಗ್ಯಾಂಗ್ ಸ್ಟರ್ಸ್’ ಸಿನಿಮಾದಲ್ಲಿ `ತು ಮಿಲಿ, ಸಬ್ ಮಿಲಾ’ ಎಂಬ ಹಾಡಿಗೆ ಧ್ವನಿ ನೀಡಿದ್ದರು.

ತ್ರಿಕೋನ ಏಕದಿನ ಸರಣಿಯ ಬಾಂಗ್ಲಾ ವಿರುದ್ಧ ಪಂದ್ಯದದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಭಾರತದ ಪರ ಟಿ20 ಕ್ರಿಕೆಟ್ ಮಾದರಿ 50 ಸಿಕ್ಸರ್ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾದರು. ಈ ಪಟ್ಟಿಯಲ್ಲಿ ಯುವರಾಜ್ ಸಿಂಗ್ (74 ಸಿಕ್ಸರ್), ರೋಹಿತ್ ಶರ್ಮಾ(69 ಸಿಕ್ಸರ್) ಮೊದಲ ಎರಡು ಸ್ಥಾನ ಪಡೆದಿದ್ದಾರೆ.

Leave a Reply

Your email address will not be published. Required fields are marked *