Sunday, 17th December 2017

ದೆಹಲಿ ಶಾಕಿಂಗ್: ಕಾಮುಕರಿಂದ ಪಾರಾಗಲು ಅಪಾರ್ಟ್‍ಮೆಂಟ್‍ನಿಂದ ಬೆತ್ತಲೆಯಾಗಿ ಕೆಳಕ್ಕೆ ಹಾರಿದ ಯುವತಿ!

– ಸಹಾಯಕ್ಕಾಗಿ ಅಂಗಲಾಚಿದ್ರೂ ಯಾರೊಬ್ಬರೂ ಬರ್ಲಿಲ್ಲ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಯುವತಿಯೊಬ್ಬಳು ಕಾಮುಕರಿಂದ ಪಾರಾಗಲು ಬೆತ್ತಲೆಯಾಗಿ ಅಪಾರ್ಟ್‍ಮೆಂಟ್‍ನಿಂದ ಹಾರಿ ತನ್ನ ಮಾನ ಮತ್ತು ಪ್ರಾಣವನ್ನು ಉಳಿಸಿಕೊಂಡಿದ್ದಾಳೆ.

ಕಾಮುಕರಿಂದ ಯುವತಿ ಹೇಗೋ ತಪ್ಪಿಸಿಕೊಂಡು ಅಪಾರ್ಟ್‍ಮೆಂಟಿನ ಮೊದಲ ಮಹಡಿಯಿಂದ ಬೆತ್ತಲೆಯಾಗಿಯೇ ಹಾರಿ ಬಳಿಕ ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಆದ್ರೂ ಯಾರೋಬ್ಬರೂ ಆಕೆಯ ಸಹಾಯಕ್ಕೆ ಬಾರದಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.

ಏನಿದು ಪ್ರಕರಣ?: 23 ವರ್ಷದ ನೇಪಾಳದ ಯುವತಿಯ ಮೇಲೆ ಗ್ಯಾಂಗ್ ರೇಪ್ ಮಾಡಲು ಐವರು ಯುವಕರು ಮುಂದಾಗಿದ್ದರು. ಈ ಕಾಮುಕರಿಂದ ಪಾರಾಗಲು ಬೆಳಗ್ಗೆ 5.45ರ ವೇಳೆಗೆ ದೆಹಲಿಯ ಪಾಂಡವ ನಗರದ ಅಪಾರ್ಟ್‍ಮೆಂಟಿನ ಮೊದಲನೇ ಮಹಡಿಯಿಂದ ಹಾರಿದ್ದಾಳೆ. ಬಳಿಕ ರೋಡಿನಲ್ಲಿ ಬೆತ್ತಲೆಯಾಗಿಯೇ ನಡೆದುಕೊಂಡು ಜನರ ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಆದ್ರೆ ರೋಡಿನಲ್ಲಿ ಯಾರೊಬ್ಬರೂ ಆಕೆಗೆ ಸಹಾಯ ಮಾಡದೆ ಅಮಾನವೀಯತೆ ಮೆರೆದಿದ್ದಾರೆ.

ಕೊನೆಗೆ ಆಕೆ ರಿಕ್ಷಾವೊಂದನ್ನು ನಿಲ್ಲಿಸಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಅಂತೆಯೇ ಆಟೋ ಚಾಲಕ ಆಕೆಯ ಸಹಾಯಕ್ಕೆ ಬಂದಿದ್ದಾರೆ. ಈಕೆ ಆಟೋ ಚಾಲಕನ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿದ್ದವರು ಆಕೆಯನ್ನೇ ನೋಡುತ್ತಿದ್ದರೇ ಹೊರತು ಆಕೆಗೆ ಬಟ್ಟೆ ಕೊಟ್ಟು ಮಾನ ಮುಚ್ಚಿಕೊಳ್ಳಲು ಸಹಾಯ ಮಾಡಲಿಲ್ಲ.

ಯುವತಿಯ ದೂರಿನ ಬಳಿಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಟ್ಟಡಿಂದ ಜಿಗಿದಿದ್ದ ಪರಿಣಾಮ ಕಾಲುಗಳಿಗೆ ಗಾಯಗಳಾದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಕೆ ನಗರದ ಮುನಿರ್ಕಾ ಪ್ರದೇಶದಲ್ಲಿ ವಾಸವಾಗಿದ್ದಳು ಅಂತಾ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ದೂರಿನಲ್ಲೇನಿತ್ತು?: ಗೆಳೆಯ ವಿಕಾಸ್ ಎಂಬ ಗೆಳೆಯ ಪಾರ್ಟಿಗೆ ಕರೆದಿದ್ದನು. ಹೀಗಾಗಿ ನಾನು ಪಾಂಡವ್ ನಗರಕ್ಕೆ ತೆರಳಿದ್ದೆ. ನಾನು ಆತನ ರೆಸಿಡೆನ್ಸಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ವಿಕಾಸ್‍ನ ಇಬ್ಬರು ಗೆಳೆಯರು ದಾರಿ ಮಧ್ಯೆ ಸಿಕ್ಕಿದ್ದರು. ನಾವು ಮೂವರು ಸೇರಿ ವಿಕಾಸ್ ಮನೆಗೆ ಹೋಗಿದ್ದೇವು. ಅದಾಗಲೇ ವಿಕಾಸ್ ಮನೆಯಲ್ಲಿ ಇಬ್ಬರು ಹಾಜರಿದ್ದರು. ಆದ್ರೆ ಈ ವೇಳೆ ನನಗೆ ಸ್ವಲ್ಪ ಕೆಲಸ ಇದೆ ಹೊರಗೆ ಹೋಗಿ ಬರ್ತೀನಿ ಅಂತಾ ವಿಕಾಸ್ ನನ್ನ ಜೊತೆ ಹೇಳಿ ಹೋಗಿದ್ದನು. ಈತ ಹೋದ ಬಳಿಕ ಉಳಿದ ಗೆಳೆಯರು ಸೇರಿ ಒತ್ತಾಯ ಮಾಡಿ ಆಲ್ಕೋಹಾಲ್ ಕುಡಿಸಿದ್ದಾರೆ. ಆ ಬಳಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಪ್ರಕರಣ ಸಂಬಂಧ ಆರೋಪಿಗಳಾದ ನವೀನ್ ಕುಮಾರ್, ಪ್ರತೀಕ್ ಕುಮಾರ್, ವಿಕಾಸ್ ಮೆಹ್ರಾ, ಸರ್ವ್‍ಜೀತ್ ಹಾಗೂ ಲಕ್ಷ್ಯ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಕಾಲ್‍ಸೆಂಟರ್ ಉದ್ಯೋಗಿಗಳಾಗಿದ್ದಾರೆ. ಸದ್ಯ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 376ಡಿ(ಗ್ಯಾಂಗ್ ರೇಪ್), ಸೆಕ್ಷನ್ 323(ಕೈಯಿಂದ ಹಲ್ಲೆ), ಸೆಕ್ಷನ್ 506(ಜೀವ ಬೆದರಿಕೆ), ಸೆಕ್ಷನ್ 342 (ಅಕ್ರಮ ಬಂಧನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *