Sunday, 27th May 2018

Recent News

ನಿಗೂಢವಾಗಿ ನಾಪತ್ತೆಯಾಗಿದ್ದ ವ್ಯಕ್ತಿಯ ರುಂಡ ಆತನ ಗೋಡೌನ್‍ನಲ್ಲಿ ಪತ್ತೆ

ಬೆಂಗಳೂರು: ಕಳೆದ ಒಂದು ವಾರದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ತಲೆಯನ್ನು ಕತ್ತರಿಸಿ ಆತನ ಗೋಡನ್‍ನಲ್ಲೇ ಬಚ್ಚಿಟ್ಟಿದ ಘಟನೆ ನಗರದ ಹೊರವಲಯ ನೆಲಮಂಗಲ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದೆ.

ನೆಲಮಂಗಲದ ಎಂ.ಡಿ.ಅಲಿ ವುಡ್ ಪ್ಯಾಕರ್ಸ್ ಗೋಡಾನ್ ಮಾಲೀಕ ಮುಂಜುನಾಥ್ ಅಲಿಯಾಸ್ ಆರೆಕ್ಸ್ ಮಂಜು ಒಂದು ವಾರದ ಹಿಂದೆ ನಾಪತ್ತೆಯಾಗಿದ್ದರು. ಈ ಕುರಿತು ದೂರನ್ನು ಪಡೆದ ನೆಲಮಂಗಲ ಗ್ರಾಮಾಂತರ ಪೊಲೀಸರು ತನಿಖೆಯನ್ನು ಆರಂಭಿಸಿದ್ದರು. ತನಿಖೆ ವೇಳೆ ಮಂಜುನಾಥ್ ರನ್ನು ಹತ್ಯೆ ಮಾಡಿದ್ದ ಆರೋಪಿಗಳಾದ ಸೈಯದ್ ಸಿದ್ದಿಕ್ ಹಾಗೂ ಶಂಶುದ್ದೀನ್ ರನ್ನು ಬಂಧಿಸಿದ್ದರು ಅನಂತರ ಆತನ ಮೃತ ದೇಹದ ಪತ್ತೆ ಕಾರ್ಯಾಚರಣೆ ನಡೆಸಿದ್ದರು.

 ಈ ವೇಳೆ ಮೃತ ದೇಹದ ರುಂಡದ ಬಗ್ಗೆ ತನಿಖೆ ನಡೆಸಿದ ಪೊಲೀಸರು ಇಂದು ನೆಲಮಂಗಲ ಬಳಿಯ ಗೋಡನ್ ನಲ್ಲಿ ಪತ್ತೆ ಹಚ್ಚಿದ್ದಾರೆ.

ಆರೋಪಿಗಳಾದ ಸೈಯದ್ ಸಿದ್ದಿಕ್ ಹಾಗೂ ಶಂಶುದ್ದೀನ್ ಮೃತ ಮಂಜುನಾಥ್ ಅವರ ಗೋಡನ್ ಬಾಡಿಗೆ ಪಡೆದಿದ್ದರು. ಹಣಕಾಸಿನ ವಿಚಾರದಲ್ಲಿ ಗಲಾಟೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆರೋಪಿಗಳು ಮಂಜುನಾಥ್ ರುಂಡವನ್ನು ಆತನ ಗೋಡನ್ ನಲ್ಲಿ ಐದು ಅಡಿ ಗುಂಡಿ ತೋಡಿ ಬಚ್ಚಿಟ್ಡಿದ್ದರು.

ಪ್ರಸ್ತುತ ಮುಂಜಾಗೃತವಾಗಿ ನೆಲಮಂಗಲದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, 2 ಡಿಅರ್ ತುಕಡಿ, 1 ಕೆಎಸ್‍ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *