Sunday, 24th June 2018

Recent News

ಶಿಖರ್ ಧವನ್, ವಿರಾಟ್ ಕೊಹ್ಲಿ ಭರ್ಜರಿ ಆಟ – ಟೀಂ ಇಂಡಿಯಾಗೆ 9 ವಿಕೆಟ್ ಗೆಲುವು

ಡಂಬುಲ್ಲಾ: ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ. ಆರಂಭಿಕ ಆಟಗಾರ ಶಿಖರ್ ಧವನ್ ಭರ್ಜರಿ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಅರ್ಧ ಶತಕ ದಾಖಲಿಸಿ ಭಾರತದ ಗೆಲುವಿನ ರೂವಾರಿಯಾದರು.

ಶಿಖರ್ ಧವನ್ 90 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 20 ಬೌಂಡರಿಗಳ ನೆರವಿನಿಂದ 132 ರನ್ ಗಳಿಸಿದರು. ವಿರಾಟ್ ಕೊಹ್ಲಿ 70 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ 82 ರನ್ ಗಳಿಸಿದರು. ಟೀಂ ಇಂಡಿಯಾ ಕೇವಲ 28.5 ಓವರ್ ಗಳಲ್ಲಿ 220 ರನ್ ಗಳಿಸಿ ಏಕದಿನ ಪಂದ್ಯದ ಸರಣಿಯಲ್ಲಿ ಗೆಲುವಿನ ಶುಭಾರಂಭ ಮಾಡಿತು.

ಗೆಲ್ಲಲು 216 ರನ್ ಗಳ ಸುಲಭ ಟಾರ್ಗೆಟ್ ಬೆನ್ನತ್ತಿದ ಭಾರತ ಮೊದಲ ವಿಕೆಟನ್ನು 5ನೇ ಓವರ್ ನಲ್ಲಿ ಕಳೆದುಕೊಂಡಿತು. ರನ್ ಗಳಿಸಲು ಓಡುತ್ತಿದ್ದ ರೋಹಿತ್ ಶರ್ಮಾ ಸ್ಟಂಪ್ ತಲುಪುವ ವೇಳೆ ಬ್ಯಾಟ್ ಕೈತಪ್ಪಿದ್ದರಿಂದ ಶರ್ಮಾ ರನೌಟ್ ಆಗಬೇಕಾಯಿತು.

ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾದ ಆರಂಭಿಕ ಆಟಗಾರರು ಮೊದಲ ವಿಕೆಟ್ ಗೆ 74 ರನ್ ಗಳ ಜೊತೆಯಾಟ ನೀಡಿದರು. ಆದರೆ 14ನೇ ಓವರ್ ನಲ್ಲಿ ಚಹಲ್ ಎಸೆತಕ್ಕೆ ಶ್ರೀಲಂಕಾದ ಆರಂಭಿಕ ಆಟಗಾರ ಗುಣತಿಲಕ 35 ರನ್ ಗಳಿಸಿ ಔಟಾದರು. 25ನೇ ಓವರ್ ನಲ್ಲಿ 1 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿದ್ದ ಶ್ರೀಲಂಕಾ 43.2 ಓವರ್ ಗಳಲ್ಲಿ ಕೇವಲ 216 ರನ್ ಗಳಿಗೆ ಆಲೌಟಾಯ್ತು.

ಟೀಂ ಇಂಡಿಯಾ ಪರವಾಗಿ ಅಕ್ಷರ್ ಪಟೇಲ್ 3, ಕೇದಾರ್ ಜಾಧವ್, ಚಾಹಲ್ ಹಾಗೂ ಬೂಮ್ರಾ ತಲಾ 2 ವಿಕೆಟ್ ಗಳಿಸಿದರು.

Leave a Reply

Your email address will not be published. Required fields are marked *