Saturday, 23rd June 2018

Recent News

ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ ಕೊಲೆ, ಗುಪ್ತಚರ ಇಲಾಖೆ ಏನ್ ಮಾಡ್ತಿದೆ?- ಶೋಭಾ ಪ್ರಶ್ನೆ

ಬೆಂಗಳೂರು: ಕರಾವಳಿಯಲ್ಲಿ ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿಯೇ ಕೊಲೆಗಳು ನಡೆಯುತ್ತಿವೆ ಅಂತ ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳೂರಿನ ಇಲಿಯಾಸ್ ಕೊಲೆ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಯಾರನ್ನು ಹತ್ಯೆ ಮಾಡ್ತಾರೋ ಗೊತ್ತಿಲ್ಲ. ಸರ್ಕಾರಕ್ಕೆ ಇಷ್ಟೆಲ್ಲ ಆಗುತ್ತಿದ್ರೂ, ಅವರ ಹತ್ತಿರವೇ ಗುಪ್ತಚರ ಇಲಾಖೆ ಇದ್ದರೂ ಏನೂ ಮಾಡ್ತಿಲ್ಲ. ಕೂಡಲೇ ಅಪರಾಧಿಗಳನ್ನು ಬಂಧಿಸಬೇಕು ಅಂತ ಆಗ್ರಹಿಸಿದ್ರು. ಇದನ್ನೂ ಓದಿ: ಸಚಿವ ಖಾದರ್ ಜೊತೆ ಕಾಣಿಸಿಕೊಂಡಿದ್ದ ಇಲಿಯಾಸ್ ನ ಬರ್ಬರ ಹತ್ಯೆ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಿ ಹಿಂದೂ-ಮುಸ್ಲಿಂ ಮಧ್ಯೆ ಜಗಳ ಹಚ್ಚುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಸರ್ಕಾರದ ಪ್ರಾಯೋಜಕತ್ವದಲ್ಲಿ ರಾಜ್ಯದಲ್ಲಿ ಕೊಲೆಗಳು ನಡೆಯುತ್ತಿವೆ ಅಂತ ಆರೋಪಿಸಿದ ಅವರು, ಹಿಂದೂಗಳನ್ನು ಮುಸಲ್ಮಾನರು ಕೊಲೆ ಮಾಡಬೇಕು. ಮುಸಲ್ಮಾನರನ್ನು ಹಿಂದೂಗಳು ಕೊಲೆ ಮಾಡಬೇಕು ಅನ್ನೋ ಕುಮ್ಮಕ್ಕನ್ನು ರಾಜ್ಯ ಸರ್ಕಾರ ಕೊಡುತ್ತಿದೆ. ಅಪರಾಧಿಗಳನ್ನು ಬಂಧಿಸುವಂತಹ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ. ಅದರ ಬದಲಾಗಿ ಉಗ್ರವಾದಿ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಅಂದ್ರು. ಇದನ್ನೂ ಓದಿ: `ಟಾರ್ಗೆಟ್’ ಇಲಿಯಾಸ್ ಕೊಲೆ ಬಗ್ಗೆ ಸಚಿವ ಖಾದರ್ ಹೀಗಂದ್ರು

ಮುಸಲ್ಮಾನರಲ್ಲಿ ಕೆಲವೇ ಜನ ಉಗ್ರವಾದಿಗಳು, ಜಿಹಾದಿಗಳು ಹಾಗೂ ಪಿಎಫ್‍ಐ ಸಂಘಟನೆ ಜೊತೆ ಇದ್ದಾರೆ. ಇಂತಹವರಿಗೆ ಪ್ರೇರಣೆ ನೀಡಿ ಒಡೆದು ಆಳುವಂತಹ ನೀತಿಯನ್ನು ಮಾಡಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಸಂಘರ್ಷವನ್ನು ಉಂಟುಮಾಡುವಂತಹ ವ್ಯವಸ್ಥಿತ ಷಡ್ಯಂತ್ರದ ಫಲವಾಗಿ ಇಂತಹ ಘಟನೆಗಳು ನಡೆಯುತ್ತಿದೆ ಅಂತ ಕಿಡಿಕಾರಿದ್ರು.

ತಕ್ಷಣ ಕೊಲೆ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಬೇಕು. ಹಾಗೆಯೇ ಇನ್ನುಳಿದ 3 ತಿಂಗಳಾದ್ರೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಹೊರಬೇಕು ಅಂತ ಸರ್ಕಾರಕ್ಕೆ ಆಗ್ರಹಿಸಿದ್ರು.

Leave a Reply

Your email address will not be published. Required fields are marked *